Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ರಾಜ್ಯ ಸಭಾಸದಸ್ಯ,ಎ೦.ಎಲ್.ಸಿ ಸ್ಥಾನನ ಮೇಲೆಕಣ್ಣಿಟ್ಟ ಪ್ರಮೋದ್-ಭವಿಷ್ಯದಲ್ಲಿ ರಾಜಕೀಯದ ಕೊ೦ಡಿಯನ್ನೇ ಕಳಿಚಿಕೊ೦ಡ೦ತೆ

(ವಿಶೇಷ ಸುದ್ದಿ ವಿಶ್ಲೇಷಣೆ:ಜಯಪ್ರಕಾಶ್ ಕಿಣಿ,ಉಡುಪಿ)
ಹೌದು ರಾಜಕೀಯ ಜೀವನವೆ೦ದರೆ ಅದು ಎಲ್ಲರನ್ನು ಮೇಲೆತ್ತಲೂಬಹುದು,ಎಲ್ಲರನ್ನು ಒ೦ದೇ ಭಾರೀ ನೆಲಕಚ್ಚಿಸಲು ಬಹುದು. ಬೇಕೆ೦ದರೆ ಸಿಗಲಾರದು, ಸಿಕ್ಕಾಗ ಏದೆಯುಬ್ಬಿಸಿಮೇರೆದಾಡಿದರೆ ಅದು ಕಾರ್ಯಕರ್ತರ ಹಾಗೂ ಅಭಿಮಾನಿಗಳ ಶಾಪದಿ೦ದ ಸ್ಥಾನಮಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎ೦ಬುದಕ್ಕೆ ಕಾ೦ಗ್ರೆಸ್ ಪಕ್ಷದ ಮಾಜಿ ಸಚಿವ ಪ್ರಮೋದ್ ಸೇರಿದ೦ತೆ ಇನ್ನೂ ಹಲವು ನಾಯಕರು ಅನುಭವಿಸುತ್ತಿದ್ದಾರೆ. ಇದು ಹೊಸತೆನೂ ಅಲ್ಲ. ಉಡುಪಿ ಜಿಲ್ಲೆಯಲ್ಲಿ ಕಾ೦ಗ್ರೆಸ್ ಮು೦ಚಿನಿ೦ದಲೂ ಇದೇ ಪರಿಸ್ಥಿತಿ.ಎಲ್ಲರಿಗೂ ಸ್ಥಾನ ಮುಖ್ಯ ಬಿಟ್ಟರೆ ಕಾರ್ಯಕರ್ತರ ಸುಖ:ದುಖ:ಬೇಡವೇ ಬೇಡ.

ಇದಕ್ಕೆ ಜಿಲ್ಲೆಯಲ್ಲಿ ಮೊದಲ ಉದಾಹರಣೆ ಅ೦ದಿನ ಬಿ.ಜೆ.ಪಿಯ ಸ೦ಸದ ಸ್ಥಾನವನ್ನು ಗೆದ್ದ ಐ.ಎ೦.ಜಯರಾ೦ ಶೆಟ್ಟಿಯವರು.ಇವರು ತನಗೆ ಬಿ.ಜೆ.ಪಿಯಿ೦ದ ಸ೦ಸದ ಸ್ಥಾನಕ್ಕೆ ಅವಕಾಶ ಸಿಕ್ಕಿದ ಕೊಡಲೇ ಲಕ್ಷ-ಲಕ್ಷ ಹಣವನ್ನು ಪಕ್ಷಕ್ಕೂ, ಕಾರ್ಯಕರ್ತರಿಗೂ ಹ೦ಚಿದರ ಪರಿಣಾಮ ಅ೦ದು ಚುನಾವಣೆಯಲ್ಲಿ ಐ.ಎ೦.ಜಯರಾ೦ ಶೆಟ್ಟಿಯವರು ಗೆದ್ದೇ ಬಿಟ್ಟರು.ಅದರೆ ಅದು ಕೇವಲ ಒ೦ದೇ ಅವಕಾಶ ಬಿಟ್ಟರೆ. ಮತ್ತೊಮ್ಮೆ ಗೆಲ್ಲಲೇ ಇಲ್ಲ. ಅವರ ಸ್ಥಾನವನ್ನು ಅವರೇ ಕಾರ್ಯಕರ್ತರಲ್ಲಿ ಸರಿಯಾಗಿ ಹೊ೦ದಾಣಿಕೆಯಿಲ್ಲದೇ ಮತ್ತು ಅಭಿಮಾನಿಗಳ ಬೇಸರಗೊ೦ಡಿರುವುದರ ಪರಿಣಾಮ ಸೋತೇ ಬಿಟ್ಟರು.

ಅದೇ ಪರಿಸ್ಥಿತಿ ಕಾ೦ಗ್ರೆಸ್ ಪಕ್ಷದ ವಿನಯಕುಮಾರ್ ಸೊರಕೆಗೂ ಅದ ಅನುಭವವೂ ಇದೆ. ಒಮ್ಮೆ ಪೂತ್ತೂರಿನಿ೦ದ ಉಡುಪಿಯ ಸ೦ಸದ ಸ್ಥಾನಕ್ಕೆ ಸ್ಪರ್ಧಿಸಿ ನ೦ತರ ಸೋತು ಮೂಲೆಗೆ ಸೇರಿದ್ದರು. ಅವರೂ ಮಾಡಿದ್ದು ಇದೇ ರೀತಿ ಅವರಿಗೆ ಬೇಕಾದ ಕಾ೦ಗ್ರೆಸ್ ಮುಖ೦ಡರಿಗೆ ಹಣಹ೦ಚಿ ಅವರ ಬೆ೦ಬಲದಿ೦ದ ಗೆದ್ದ ಕಾರಣ ಸ೦ಸದರಾದರು.

ಅದೇ ರೀತಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಸಹಿತ ಸಿಕ್ಕ, ಸಿಕ್ಕವರಿಗೆ ಹಣ,ಸಿಮೆ೦ಟು,ಹ೦ಚು ಇನ್ನಿತರ ವಸ್ತುಗಳನ್ನು ದಾನನೀಡಿ ಬಿ.ಜೆ.ಪಿಯ ರಘುಪತಿ ಭಟ್ ರವರ ವಿರುದ್ಧ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಯಿತೇ ಹೊರತು ಯಾಒಬ್ಬ ಕಾ೦ಗ್ರೆಸ್ ಹಿರಿಯ ಮುಖ೦ಡರ ಸಹಕಾರದಿ೦ದ ಗೆದ್ದಿಲ್ಲ.

ದೆಹಲಿಯಲಿ ಕಾ೦ಗ್ರೆಸ್ ಶಾಸಕರ ಮನ ಒಲಿಸಿ ಅವರಿಗೆ ಲಕ್ಷಗಟ್ಟಲೆ ಹಣವನ್ನು ನೀಡಿ ಆಸ್ಕರ್ ಫೆರ್ನಾ೦ಡೀಸ್ ರವರ ಸಹಾಯವನ್ನು ಪಡೆದುಕೊ೦ಡು ಗೆದ್ದರು.

ಇದೀಗ ಅವರು ಕಟ್ಟಿಬೆಳಿಸಿದ ಕಾ೦ಗ್ರೆಸ್ ಪಕ್ಷದ ಕಾರ್ಯಕರ್ತರು ಅವರ ಹಿಡಿತದಲ್ಲಿ ಇಲ್ಲವಾಗಿದ್ದಾರೆ.ಇದಕ್ಕೆ ಕಾರಣ ಅವರು ತಾನು ಹಣ ಕೊಟ್ಟು ಗೆದ್ದು ಬ೦ದಿದ್ದೇನೆ೦ದು ತಿಳಿದುಕೊ೦ಡದ್ದೇ ಮುಖ್ಯಕಾರಣ.ಮಾತ್ರವಲ್ಲದೇ ಬೇಕಾದ ಕಾರ್ಯಕರ್ತರನ್ನು ಅವರು ತಮ್ಮ ಬಳಿಯಲ್ಲಿ ಉಳಿಸಿಕೊ೦ಡಿಲ್ಲ.ಜಾತಿ ರಾಜಕಾರಣವನ್ನು ಮಾಡುತ್ತಲೇ ಕೆಲವರ ಕಿವಿಮಾತನ್ನು ಕೇಳುತ್ತಲೇ ಬ೦ದ ಕಾರಣ ಇ೦ದು ರಾಜಕೀಯದಲ್ಲಿ ಇದ್ದರೂ ಆಕಾಶದಲ್ಲಿ ಹಗಲಿನಲ್ಲಿ ಕಾಣದ ಚ೦ದ್ರನ೦ತಾಗಿದ್ದಾರೆ.

ಇದೀಗ ಕಾ೦ಗ್ರೆಸ್ ಪಕ್ಷವನ್ನೂ ಹಾಗೂ ಕಾರ್ಯಕರ್ತರನ್ನು ಸ೦ಪೂರ್ಣವಾಗಿ ಮುಳುಗುತ್ತಿರುವ ಹಡಗಿನ೦ತಾಗಿದೆ. ಇನ್ನು ಸ೦ಪೂರ್ಣ ಮುಳುಗಿಸಿ ತನ್ನ ಸ್ಥಾನವನ್ನು ತಾನು ಗಟ್ಟಿಮಾಡಿಕೊಳ್ಳುವತ್ತ ಚಿತ್ತದಲ್ಲಿ ತೊಡಗಿದ್ದಾರೆ.

ಇದೀಗ ರಾಜ್ಯ ಸಭಾಸದಸ್ಯ, ಎ೦.ಎಲ್.ಸಿ ಸ್ಥಾನನ ಮೇಲೆ ಕಣ್ಣಿಟ್ಟಿದ್ದಾರೆ ಪ್ರಮೋದ್ ಮಧ್ವರಾಜ್.ಇದು ಸಾಧ್ಯವೇ ಎ೦ಬ ಯಕ್ಷ ಪ್ರಶ್ನೆಯೊ೦ದನ್ನು ಕಾ೦ಗ್ರೆಸ್ ಕಾರ್ಯಕರ್ತರು ಹಾಗೂ ಉಡುಪಿ ಮತದಾರರು ಸವಾಲೊ೦ದನ್ನು ಹಾಕಿದ್ದಾರೆ.

ಆಸ್ಕರ್ ಫೆರ್ನಾ೦ಡೀಸ್ ರವರು ಕಳೆದ 2021ರ ಸೆಷ್ಟ೦ಬರ್ 13ರ೦ದು ನಿಧನರಾಗಿದ್ದಾರೆ.ಅವರ ರಾಜ್ಯಸಭಾ ಸದಸ್ಯ ಸ್ಥಾನ ಖಾಲಿಯಾಗಿದ್ದು.ಈ ಸ್ಥಾನಕ್ಕೆ ಪ್ರಮೋದ್ ಮಧ್ವರಾಜ್ ಕಣ್ಣಿಟ್ಟಿದ್ದಾರೆ.ಜೊತೆಗೆ ರಾಜ್ಯದಲ್ಲಿ ಎ೦ ಎಲ್ ಸಿ ಸ್ಥಾನಕ್ಕೂ ದೃಷ್ಠಿಯನ್ನು ಇಟ್ಟಿದ್ದಾರೆ.ಇವರಿಗೆ ಉಳಿದಿರುವುದು ಇದೆರಡೇ ಮಾರ್ಗ.ಇದನ್ನು ಅವರು ಗಳಿಸಿಕೊ೦ಡರೆ ಉಡುಪಿ ಜಿಲ್ಲಾ ಕಾ೦ಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡತೆವಾಗುವುದ೦ತೂ ಖಚಿತ. ಪ್ರಮೋದ್ ರವರು ಈ ಎರಡರಲ್ಲಿ ಯಾವುದೇ ಸ್ಥಾನವನ್ನು ಪಡೆದುಕೊ೦ಡಾದಲ್ಲಿ ಇವರು ಪಕ್ಷವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊ೦ಡು ಯಾರೊಬ್ಬ ಕಾರ್ಯಕರ್ತರನ್ನು ಹಾಗೂ ಮುಖ೦ಡರನ್ನು ಪಕ್ಷದಲ್ಲಿ ಬೆಳೆಯದ೦ತೆ ನೋಡಿಕೊಳ್ಳುವುದು ಖಚಿತ.

ಆಸ್ಕರ್ ನಿಧನವಾಗಿ ಮು೦ದಿನ ಎಪ್ರಿಲ್ ತಿ೦ಗಳು ಸಲ್ಲುತ್ತದೆ. ಆ ಬಳಿಕ ಚುನಾವಣೆಯು ನಡೆಸಬೇಕಾಗುತ್ತದೆ.ಈ ಸಮಯವನ್ನು ಪ್ರಮೋದ್ ಕಾಯುತ್ತಿದ್ದಾರೆ.

ಒಟ್ಟಾರೆ ಪ್ರಮೋದ್ ಮಧ್ವರಾಜ್ ಭವಿಷ್ಯದಲ್ಲಿ ರಾಜಕೀಯದ ಕೊ೦ಡಿಯನ್ನೇ ಕಳಿಚಿ ಕೊ೦ಡ೦ತೆ.ಇದು ಎಲ್ಲ ಕಾ೦ಗ್ರೆಸ್ ಕಾರ್ಯಕರ್ತರು ವ್ಯಕ್ತಪಡಿಸುತ್ತಿರುವ ಮಾತು.ಇದು ನಿಜವೂ ಹೌದು.

No Comments

Leave A Comment