Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ: ಹೈಕೋರ್ಟ್ ಮಧ್ಯಂತರ ಆದೇಶ ಪಾಲನೆಗೆ ನಕಾರ, ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಿದ ಕಾಲೇಜ್

ಉಡುಪಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವವರೆಗೂ ಡಿಗ್ರಿ ಅಥವಾ ಪಿಜಿ ಆಗಿರಲಿ, ನಿಗದಿತ ಸಮವಸ್ತ್ರ ಪಾಲಿಸಬೇಕೆಂದು ಹೈಕೋರ್ಟ್ ಬುಧವಾರ ತೀರ್ಪು ನೀಡಿದ್ದರೂ, ಇಲ್ಲಿನ ಎಂಜಿಎಂ ಕಾಲೇಜಿನ 25 ವಿದ್ಯಾರ್ಥಿನಿಯರು ತರಗತಿ ಕೊಠಡಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಗುರುವಾರ ಕಾಲೇಜ್ ಆಡಳಿತ ಮಂಡಳಿಯೊಂದಿಗೆ ವಾಗ್ವಾದ ನಡೆಸಿದರು.

ಈ ಡಿಗ್ರಿ ವಿದ್ಯಾರ್ಥಿನಿಯೊಂದಿಗೆ ಏಕೈಕ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸಾನಾಗೂ ಹಿಜಾಬ್ ಧರಿಸದೆ ತರಗತಿಗೆ ಹಾಜರಾಗುವಂತೆ ಸೂಚಿಸಲಾಯಿತು. ಸಂಸ್ಥೆಯಲ್ಲಿ ಪ್ರತ್ಯೇಕ ಪಿಜಿ ಸೆಂಟರ್ ಇಲ್ಲದಿರುವುದರಿಂದ ಹಿಜಾಬ್ ಧರಿಸದೆ ತರಗತಿ ಕೊಠಡಿಯೊಳಗೆ ಹಾಜರಾಗಲು ಎಂಎಸ್ಸಿ ( ಕಂಪ್ಯೂಟರ್ ಸೈನ್ಸ್ ) ವಿದ್ಯಾರ್ಥಿನಿ ಸಾನಾಗೆ ಸೂಚಿಸಲಾಗಿದೆ ಎಂದು ಪ್ರಿನ್ಸಿಪಾಲ್ ಡಾ. ದೇವಿದಾಸ್ ನಾಯಕ್ ಹೇಳಿದರು.

ಎಂಜಿಎಂ ಡಿಗ್ರಿ ಕಾಲೇಜಿನ ಆಡಳಿತ ಮಂಡಳಿ ಪಿಜಿ ಕೋರ್ಸ್  ಎಸ್ ಎಸ್ ಸಿ( ಕಂಪ್ಯೂಟರ್ ಸೈನ್ ) ನೋಡಿಕೊಳ್ಳುತ್ತಿದೆ. ಆದ್ದರಿಂದ ಪಿಜಿ ಕೋರ್ಸ್ ಕೂಡಾ ಡಿಗ್ರಿ ಕಾಲೇಜಿನ ಮ್ಯಾನೇಜ್ ಮೆಂಟ್ ನ  ಭಾಗವಾಗಿದೆ. ಪಿಜಿ ತರಗತಿಗಳು ಕೂಡಾ ನಿಗದಿತ ಸಮವಸ್ತ್ರ ಮಾಡಲಾಗಿದೆ. ಆದ್ದರಿಂದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಏಕೈಕ ವಿದ್ಯಾರ್ಥಿನಿಗೂ ಹಿಜಾಬ್ ಧರಿಸದೆ ತರಗತಿ ಕೊಠಡಿಗೆ ಬರುವಂತೆ ಸೂಚಿಸಲಾಗಿದೆ ಎಂದು ಡಾ. ನಾಯಕ್ ಹೇಳಿದರು.

ಈ ಮಧ್ಯೆ ಇತರ ಡಿಗ್ರಿ ವಿದ್ಯಾರ್ಥಿಗಳು ಬುಧವಾರ ಆಂತರಿಕ ಪರೀಕ್ಷೆ ಬರೆದಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. ಈ ವಿದ್ಯಾರ್ಥಿನಿಯರು ಇಂದು ಬೆಳಗ್ಗೆ ಕಾಲೇಜ್ ಬಳಿ ಬಂದು  ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದಾಗ್ಯೂ. ತರಗತಿ ವೇಳೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಂತೆ ನ್ಯಾಯಾಲಯದ ಮಧ್ಯಂತರ ಆದೇಶವಿರುವುದಾಗಿ ಪ್ರಿನ್ಸಿಪಾಲರು ಹೇಳಿದರು. ನಂತರ ವಿದ್ಯಾರ್ಥಿನಿಯರು ಕ್ಯಾಂಪಸ್ ನಲ್ಲಿ ವಾಗ್ವಾದದಲ್ಲಿ ತೊಡಗಿದರು.

ತರಗತಿಗೆ ಹಾಜರಾಗಬೇಕಾದಲ್ಲಿ ಕೋರ್ಟಿನ ಮಧ್ಯಂತರ ಆದೇಶ ಪಾಲಿಸಿ, ಇಲ್ಲದಿದ್ದರೆ ಕ್ಯಾಂಪಸ್ ತೊರೆಯಿರಿ, ತರಗತಿಗಳು ನಡೆಯುವಾಗ ಕ್ಯಾಂಪಸ್ ನೊಳಗೆ ಮಾತಿನ ಚಕಮಕಿ ನಡೆಸಲು ವಿದ್ಯಾರ್ಥಿಗಳಿಗೆ ಯಾವುದೇ ವಿನಾಯಿತಿ ಇಲ್ಲ ಎಂದರು. ಯಾವುದೇ ಅಹಿತರ ಘಟನೆ ನಡೆಯದಂತೆ ಕಾಲೇಜ್ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಕೆಲ ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸುತ್ತಿದ್ದು, ಕೋರ್ಟಿನ ಮಧ್ಯಂತರ ಆದೇಶ ಪಾಲಿಸುತ್ತಿದ್ದಾರೆ. ಕೆಲವರು ತರಗತಿಗೆ ಗೈರಾಗಿದ್ದು, ಕೋರ್ಟಿನ ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದಾರೆ ಎಂದು ಡಾ. ದೇವಿದಾಸ್ ನಾಯಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

No Comments

Leave A Comment