ಶುಲ್ಕಕೊಟ್ಟರೂ ಶುಚಿತ್ವವಿಲ್ಲದ ವ್ಯವಸ್ಥೆ-ಫಲಕದಲ್ಲಿ ಪಾಲನೆಯ ಬಗ್ಗೆ ಭಾರೀ ಸೂಚನೆ-ಈ ಅವ್ಯವಸ್ಥೆಗೆ ಹೊಣೆ ಯಾರು?
ಉಡುಪಿಯ ಶ್ರೀಕೃಷ್ಣಮಠದ ಪಕ್ಕದಲ್ಲಿರುವ ವಾಹನಗಳ ಪಾರ್ಕಿ೦ಗ್ ಸ್ಥಳದಲ್ಲಿ ಎಲ್ಲೆಡೆ ಶುಚಿತ್ವಕ್ಕೆ ಭಾರೀ ಮಹತ್ವ ಕೊಡಿ ಎ೦ಬ ನಾಮಫಲಕಗಳು ರಾರಾಜಿಸುತ್ತಿದೆ.ಅದರೆ ಇಲ್ಲಿ ಪಾರ್ಕಿ೦ಗ್ ಶುಲ್ಕವನ್ನು ಪಡೆಯಲಾಗುತ್ತಿದೆ.ಅದರ ದರದ ಬಗ್ಗೆಯೂ ದಾಖಲಿಸಲಾಗಿದೆ. ಮತ್ತೆ ಕೆಲವು ನಿಬ೦ಧನೆಯುಳ್ಳ ಫಲಕವನ್ನು ಉಡುಪಿಯ ನಗರಸಭೆ ಹಾಗೂ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ(ರಿ) ರವರು ಅಲ್ಲಲ್ಲಿ ಅಳವಡಿಸಿದ್ದಾರೆ.
ಇದೀಗ ಇಲ್ಲಿ ಕಳೆದ ಒ೦ದು ತಿ೦ಗಳ ಹಿ೦ದೆ ಪರ್ಯಾಯದ ಪ್ರಯುಕ್ತವಾಗಿ ಹೊರೆ ಕಾಣಿಕೆಯಲ್ಲಿ ಬ೦ದ ತರಕಾರಿ, ಹಣ್ಣುಹ೦ಪಲು, ಅಕ್ಕಿ, ತೆ೦ಗಿನ ಕಾಯಿ ಸೇರಿದ೦ತೆ ವಿವಿಧ ರೀತಿಯ ವಸ್ತುಗಳ ಸ೦ಗ್ರಹಿಸಿ ಇಡಲು ಉಗ್ರಾಣವನ್ನು ನಿರ್ಮಿಸಲಾಗಿತ್ತು.ಇದೀಗ ಈ ಸ್ಥಳದಲ್ಲಿ ಕಸದ ರಾಶಿ, ರಾಶಿಯೇ ತು೦ಬಿಹೋಗಿದೆ.
ಉಡುಪಿಗೆ ಬ೦ದ ಯಾತ್ರಿಕರಿಗೆ ಈ ರಾಶಿಯ ದರ್ಶನವಾದ ಬಳಿಕವೇ ಶ್ರೀಕೃಷ್ಣದರ್ಶನ ಪಡೆಯುವ ಭಾಗ್ಯ ಎ೦ದರೆ ತಪ್ಪಾಗಲಾರದು. ಅದರ ನಡುವೆ ಇತ್ತೀಚಿನ ದಿನಗಳ ಹಿ೦ದೆ ಇಲ್ಲಿ ಅ೦ಗಡಿಕೋಣೆಯನ್ನು ನಿರ್ಮಿಸುವ ಕೆಲಸವನ್ನು ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ(ರಿ)ವು ಮಾಡಿದೆ. ಈ ಅ೦ಗಡಿಗಳ ಸ್ಥಳ ಬಾಡಿಗೆಯನ್ನು ಪಡೆಯಲಾಗುತ್ತಿದೆ.ಮತ್ತೆ ಈ ಅ೦ಗಡಿಗಳಿಗೆ ಕಸವನ್ನು ಹಾಕುವ ಬಗ್ಗೆಯೂ ಸೂಚನೆಯನ್ನು ನೀಡಲಾಗಿದೆ.
ಅದರೆ ಪರ್ಯಾಯ ಮುಗಿದು ತಿ೦ಗಳು ಕಳೆದರೂ ಕಸದ ರಾಶಿಯ ಬಗ್ಗೆ ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ(ರಿ)ರವರಾಗಲಿ, ನಗರಸಭೆಯವರಾಗಲಿ ಏತಕೆ ಮಾಡಿಲ್ಲ ವಿಲೇವರಿಯನ್ನು ಮಾಡದೇ ಹಾಗೇ ಬಿಟ್ಟಿದ್ದಾರೆ೦ಬ ಪ್ರಶ್ನೆ ನಿರ್ಮಾಣವಾಗಿದೆ.
ಹೊರ ಊರಿನಿ೦ದ ಭಕ್ತರ, ಪ್ರವಾಸಿಗರ ವಾಹನ ನಿಲುಗಡೆಯ ಶುಲ್ಕವ೦ತೂ ತಪ್ಪದೇ ವಸೂಲಿಯಾಗುತ್ತಿದೆ. ಅದರೆ ಈ ಕಸದ ರಾಶಿ ಯಾಕೆ ಇಲ್ಲಿ೦ದ ಸೇರಬೇಕಾದ ಸ್ಥಳಕ್ಕೆ ಸಾಗಿಸಲಾಗಿಲ್ಲವೆ೦ಬ ಪ್ರಶ್ನೆ ಪರವೂರಿನ ಭಕ್ತರು, ಪ್ರವಾಸಿಗರ ಬಾಯಿ೦ದ ಕೇಳಿಬರುತ್ತಿದೆ. ರಾತ್ರೆ ಹಾಗೂ ಹಗಲಿನಲ್ಲಿಯೇ ಸೊಳ್ಳೆ ಕಾಟವ೦ತೂ ತಪ್ಪಿದಲ್ಲ ಇದರಿ೦ದ ಮಲೇರಿಯ, ಡೆ೦ಗ್ಯೂ ಇನ್ನಿತರ ಕಾಯಿಲೆ ಉತ್ಪತಿಯಾಗುವ ಕೇ೦ದ್ರವಾಗಿದೆ ಎ೦ದು ಸ೦ಬ೦ಧಪಟ್ಟವರಿಗೆ ಚೀಮಾರಿ ಹಾಕುತ್ತಿದ್ದಾರೆ.
ಇನ್ನಾದರೂ ಕಣ್ಣು ಮುಚ್ಚಿಕುಳಿತುಕೊಳ್ಳದೇ ತಕ್ಷಣವೇ ಈ ಸಮಸ್ಯೆಗೆ ಪರಿಹಾರವನ್ನು ದೊರಕಿಸಿ ಉಡುಪಿಯ ಹೆಸರನ್ನು ಹಾಗೂ ಮಠದ ಹೆಸರು ಹಾಳಾಗದ೦ತೆ ಎಚ್ಚರವಹಿಸಿ ಎ೦ದು ಜನರು ಒತ್ತಾಯಿಸಿದ್ದಾರೆ.
ಶುಲ್ಕಕೊಟ್ಟರೂ ಶುಚಿತ್ವವಿಲ್ಲದ ವ್ಯವಸ್ಥೆ-ಫಲಕದಲ್ಲಿ ಪಾಲನೆಯ ಬಗ್ಗೆ ಭಾರೀ ಸೂಚನೆ-ಈ ಅವ್ಯವಸ್ಥೆಗೆ ಹೊಣೆ ಯಾರು?
ಈಗೀನ ಪರ್ಯಾಯ ಮಠದವರು ಈ ಬಗ್ಗೆ ತೆಗೆಸುವ ಭರವಸೆಯನ್ನು ಕೊಟ್ಟಿದ್ದಾರೆ. ಅದರೆ ಹಣವನ್ನು ಭರಿಸಲು ಹಿ೦ದೆ ಮು೦ದೆ ನೋಡುತ್ತಿದ್ದಾರೆ ಎ೦ಬ ಬಹುದೊಡ್ಡ ಆರೋಪ ರಥಬೀದಿಯ ನಾಲ್ಕು ಕಡೆಯ ರಸ್ತೆಯಲ್ಲಿ ಕೇಳಿಬರುತ್ತಿದೆ.