Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಗೋವಿಗೆ ರಕ್ಷಣೆ ಸಿಕ್ಕರಷ್ಟೇ ಸ್ವಾತಂತ್ರ್ಯಕ್ಕೆ ಅರ್ಥ- ಸಚಿವ ಕೆ ಎಸ್ ಈಶ್ವರಪ್ಪ

ಕಾಪು: ಗೋವು, ಬಾವಿ ಧ್ವಜ, ಹೆಣ್ಣು ಈ ಮೂರಕ್ಕೂ ಕಾಯಿ ಸ್ವರೂಪವಾದ ಈ ದೇಶದಲ್ಲಿ ರಕ್ಷಣೆ, ಗ್ರಾಮಂತ್ರ ಗೌರವ ಸಿಗುವುದಿಲ್ಲವೋ ಅಲ್ಲಿತನಕ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂಬುದನ್ನು ನಂಬಲಾಗುವುದಿಲ್ಲ ಎಂದು ರಾಜ್ಯ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಕಾಪು ಕಳತ್ತೂರು ಗುರ್ಮೆ ಸೌಂಡೇಶನ್ ವತಿಯಿಂದ ಗೋವಿಹಾರ ಕೇಂದ್ರವನ್ನು ಭಾನುವಾರ ಉದ್ಘಾಟಿಸಿ ಮಾತನಾ ದೇಶಕ್ಕೆ ಸ್ವಾತಂತ್ರ್ಯ ಬಂದಿರುವ ಮೊದಲನೇ ಆದ್ಯತೆ ಗೋಹತ್ಯೆ ನಿಷೇಧ ಮಾಡುವುದೇ ಆಗಿದೆ. ಗೋವಿನ ಆಶೀರ್ವಾದದಿಂದ ಇಡೀ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದೇವೆ. ಗೋವನ್ನು ರಕ್ಷಣೆ ಮಾಡುವ ಪ್ರತಿಜ್ಞೆ ಮಾಡುತ್ತೇವೆ ಎಂದರು.

ಪುತ್ತಿಗೆ ಶ್ರೀ ಸುಗುಣೇ೦ದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಹಡೆದ ತಾಯಿ ಜತೆಗೆ ಗವು, ಗಂಗೆ ಹಾಗೂ ಮಾತೆಯಲ್ಲಿರುವ ಮಾತೃತ್ವಕ್ಕೆ ದತ್ತಿ ಸಮರ್ಪಣ ಮಾಡಿದಲ್ಲಿ ಮಾತ್ರಸೇವೆ ಪರಿಪೂರ್ಣವಾಗುತ್ತದೆ ಎಂದರು. ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು,ಶ್ರೀ ವಿನಯ ಗುರುಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ 500 ಅನಾರೋಗ್ಯ ಪೀಡಿತರಿಗೆಧನ ಸಹಾಯ, 280 ಕರೋನಾ ಸೇನಾನಿಗಳನ್ನು ಹಾಗೂ ಪೌರಕಾರ್ಮಿಕರನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ಬಸ್ಲಂತೆ ನಾನು ಅಮೀನ್, ಸಾಹಿತಿ, ಅವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮಕ್ಕೆ ಸಹಕರಿಸಿದ ಗುತ್ತಿಗೆದಾರರಾದ ಕಿಶೋರ್ ಶೆಟ್ಟಿ ಗುರ್ಮೆ, ಸಂಯನ್ ಶೆಟ್ಟಿ ತಿಲಕರಗುತ್ತು ದಂಪತಿಯನ್ನು ಅಭಿನಂದಿಸಲಾಯಿತು.

ಸಂಸದ ಬಿ.ವೈ. ರಾಘವೇಂದ್ರ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ ಸುನೀಲ್ ಕುಮಾರ್ ,ಶಾಸಕ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಡಾ. ವೈ. ಶೆಟ್ಟಿ ಬಂಜಾರ, ಸಂಗೀತ ನಿರ್ದೇಶಕ ಗುರುಕಿರಣ್ ಗುರ್ಮ ,ಫೌಂಡೇಶನ್ ಟ್ರಸ್ಟಿಗಳಾದ ಗುರ್ಮ ಹರೀಶ ಶೆಟ್ಟಿ, ಗುರ್ಮೆ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.

ಗುರ್ಮೆ ಫೌಂಡೇಷನ್ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮ ಸ್ವಾಗತಿಸಿದರು. ದಾಮೋದರ ಶರ್ಮ ಮತ್ತು ನಿತೇಶ್ ಶೆಟ್ಟಿ ವಿಶ್ವಾರು ನಿರೂಪಿಸಿದರು. ಶಿವರಾಮ ಶೆಟ್ಟಿ ಪೈಯಾರು ಮಾಡಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕಾರ್ಕಳ ಶ್ರೀಕಾಂತ ಶೆಟ್ಟಿ ಮತ್ತು ಬಳಗ, ಸಂದೇಶ ನೀರುಮಾರ್ಗ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ಬಳಿಕ ಸಾಲಿಗ್ರಾಮ ಮೇಳದಿಂದ ಯಕ್ಷಗಾನ ನಡೆಯಿತು.

No Comments

Leave A Comment