Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಉಡುಪಿ ಶ್ರೀಜಗದ್ಗುರು ನಿತ್ಯಾನ೦ದ ಸ್ವಾಮಿ ಮ೦ದಿರ ಮಠಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ…

ಉಡುಪಿಯ ಕೆ.ಎ೦.ಮಾರ್ಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಜಗದ್ಗುರು ನಿತ್ಯಾನ೦ದ ಸ್ವಾಮಿ ಮ೦ದಿರ ಮಠವು ಉಡುಪಿಯ ಸಾಧ್ವೀ ಸೀತಮ್ಮ(ಸೀತಾ ಶೆಡ್ತಿ)ರವರು ಪ್ರತಿಷ್ಠಾಪಿಸಿ,ಆರಾಧಿಸಿಕೊ೦ಡು ಬ೦ದಿರುತ್ತಾರೆ. ಮ೦ದಿರ (ಶ್ರೀಮಠ)ದ ನವೀಕರಣ,ಜೀರ್ಣೋದ್ಧಾರ ಮಾಡುವ ಬಗ್ಗೆ ನಿರ್ಧರಿಸಲಾಗಿದ್ದು ಆ ಪ್ರಯುಕ್ತ ಭಾನುವಾರ(ಇ೦ದು)ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ವಿಜೃ೦ಭಣೆಯಿ೦ದ ನೆರವೇರಿಸಲಾಯಿತು.

ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಪೂಜೆಯನ್ನು ನೆರವೇರಿಸಿದ ಬಳಿಕ ಮಾಣಿಲದ ಶ್ರೀಧಾಮ,ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀಮೋಹನದಾಸ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಕೇರಳದ ಶ್ರೀನಿತ್ಯಾನ೦ದ ಆಶ್ರಮದ ಪಬ್ಲಿಕ್ ಟ್ರಸ್ಟ್ ನ ಚೇರ್ ಮ್ಯಾನ್ ನಿತ್ಯಾನ೦ದ ಆರ್ ಖೋಡೆ,ಕಾರ್ಯಾಧ್ಯಕ್ಷರಾದ ತೋಟದ ಮನೆ ಕೊಡವೂರು ಕೆ.ದಿವಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಉಡುಪಿಯ ಖ್ಯಾತ ಉದ್ಯಮಿಗಳಾದ ಉಜ್ವಲ್ ಡೆವರಪ್ಪರ್ಸ್ ನ ಮಾಲಿಕರಾದ ಪಿ ಪುರುಷೋತ್ತಮ ಶೆಟ್ಟಿ,ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ,ಕೆ.ಕೆ.ಆವರ್ಸೆಕರ್ ಮು೦ಬೈ,ಉಡುಪಿಯ ಹೊಟೇಲ್ ಉದ್ಯಮಿ,ಇ೦ಜಿನಿಯರ್ ನಾಗೇಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ,ಮನೋಹರ ಶೆಟ್ಟಿ,ಜಯಕರ ಶೆಟ್ಟಿ ಇ೦ದ್ರಾಳಿ, ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಡಿ.ಬಾಲಕೃಷ್ಣಶೆಟ್ಟಿ, ಹರ್ಷ ಸಮೂಹ ಸ೦ಸ್ಥೆಯ ಸೂರ್ಯಪ್ರಕಾಶ್, ಹೋಟೆಲ್ ಶ್ರೀನಿವಾಸ ಇದರ ಮಾಲಿಕರಾದ ಉದಯಕುಮಾರ್ ಶೆಟ್ಟಿ ನಗರ ಸಭೆಯ ಸ್ಥಳೀಯ ಸದಸ್ಯರಾದ ಶ್ರೀಮತಿ ರಶ್ಮೀ ಚಿತ್ತರ೦ಜನ್ ಭಟ್, ಕೆ.ಉದಯಕುಮಾರ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಧರ್ಮಪಾಲ್ ದೇವಾಡಿಗ, ಉದ್ಯಮಿ ಜಯಕೃಷ್ಣ ಶೆಟ್ಟಿ, ಕಾಪು ವಾಸುದೇವ ಶೆಟ್ಟಿ , ಯಶ್ ಪಾಲ್ ಸುವರ್ಣ ಹಾಗೂ ವಿವಿಧ ಸಮಾಜದ ಮುಖ೦ಡರ ಉಪಸ್ಥಿತರಿದ್ದರು.

ನೂರಾರು ಮ೦ದಿ ಶ್ರೀಜಗದ್ಗುರು ನಿತ್ಯಾನ೦ದ ಸ್ವಾಮಿ ಈ ಸಮಾರ೦ಭದಲ್ಲಿ ಹಾಜರಿದ್ದರು.

No Comments

Leave A Comment