BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ರಾಜ್ಯಾದ್ಯಂತ ಕಡತ ವಿಲೇವಾರಿ ಅಭಿಯಾನಕ್ಕೆ ಚಿಂತನೆ: ಸಚಿವ ಆರ್. ಅಶೋಕ್

ಮಂಗಳೂರು: ಸಚಿವ ಸುನೀಲ್‌ ಕುಮಾರ್‌ ಅವರು ಕಡತ ವಿಲೇವಾರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ಅವರು ಶನಿವಾರ ಹೇಳಿದ್ದಾರೆ.

ಇಂದು ಮಂಗಳೂರಿನಲ್ಲಿ ಕಡತ ವಿಲೇವಾರಿ ಅಭೀಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಆರ್ ಅಶೋಕ್, ಕಡತ ವಿಲೇವಾರಿ ಕಾರ್ಯಕ್ರಮದಿಂದ ಆಡಳಿತ ವ್ಯವಸ್ಥೆಗೆ ವೇಗ ನೀಡಿದಂತಾಗುತ್ತದೆ. ಆಡಳಿತದಲ್ಲಿ ಹೊಸತನ ನೀಡಬೇಕು, ಅಧಿಕಾರ ಇದ್ದಾಗ ಧ್ವನಿ ಇಲ್ಲದವರಿಗೆ ಧ್ವನಿ ನೀಡಬೇಕು. ನಾವಿಂದು ವೇದಿಕೆ ಮೇಲೆ ಕೂರಲು ಕಾರಣ ಕೆಳಗಡೆ ಕುಳಿತವರು ಎನ್ನುವುದನ್ನು ಮರೆಯಬಾರದು. ಕಡತ ವಿಲೇವಾರಿ ಕಾರ್ಯಕ್ರಮವನ್ನು ರಾಜ್ಯದ್ಯಂತ ನಡೆಸಲು ಚಿಂತನೆ ನಡೆಸುತ್ತೇನೆ. ಇದೊಂದು ಉತ್ತಮ ಕಾರ್ಯ ಎಂದು ಹೇಳಿದರು.

ಡೀಮ್ಡ ಅರಣ್ಯ ಸಮಸ್ಯೆಗೂ ಸಹ ಪರಿಹಾರವನ್ನು ನೀಡುತ್ತೇನೆ. ನಮ್ಮ ಸರ್ಕಾರದ್ದು ರೈತಪರವಾದ ನಿಲುವು. ನ್ಯಾಯವನ್ನು ಎಲ್ಲರಿಗೂ ನೀಡಬೇಕು ಎನ್ನುವುದೇ ನಮ್ಮ ಆಶಯ” ಎಂದರು

ಈ ಸಂದರ್ಭದಲ್ಲಿ ಕಾಂಗ್ರೆಸ್‌ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸಿನವರಿಗೆ ರಾಜಕೀವಾಗಿ ಏನು ಮಾಡಬೇಕು ಅನ್ನುವುದೇ ತಿಳಿಯುತ್ತಿಲ್ಲ. ಬೌದ್ಧಿಕವಾಗಿ‌ ದಿವಾಳಿಯಾಗಿದ್ದಾರೆ. ಸದನದ ಮಹತ್ವ ಏನು, ಏನನ್ನು ಚರ್ಚೆ ಮಾಡಬೇಕು ಎನ್ನುವುದನ್ನು ಮರೆತಿದ್ದಾರೆ. ಜನರ ತೆರಿಗೆಯ ಕೋಟ್ಯಾಂತರ ಹಣ ಪೋಲಾಗುತ್ತಿದೆ. ಸದನವನ್ನು ಕುಸ್ತಿ ಅಖಾಡ ಅಂತ ತಿಳಿದಿದ್ದಾರೆ. ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕಾದ ಸ್ಥಳದಲ್ಲಿ ಕಾಂಗ್ರೆಸ್ ಕಾಲಹರಣ ಮಾಡತ್ತಿದೆ ಎಂದು ಹೇಳಿದರು.

ಹಿಜಾಬ್ ಸಮಸ್ಯೆ ಇಷ್ಟು ದೊಡ್ಡದಾಗಿದೆ. ಅದರ ಕುರಿತು ಮಾತನಾಡುತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ನಲ್ಲಿ ಎರಡು ತಂಡ ಇದೆ. ಮುಸ್ಲಿಂ ಪರ ಮಾತನಾಡಲು ಶಿವಕುಮಾರ್ ಒಪ್ಪುತ್ತಿಲ್ಲ, ಹಿಂದೂ ಪರ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಇಷ್ಟ ಇಲ್ಲ ಎಂದ ಅವರು, ಶಾಲೆಗಳಲ್ಲಿ ಶಿಕ್ಷಣ ಮುಖ್ಯ. ವಿದ್ಯಾರ್ಥಿಗಳು ಓದಿನ ಕಡೆ ಗಮನ ನೀಡಬೇಕು. ರಾಜಕೀಯದ ಬಲಿಪಶು ಆಗಬಾರದು” ಎಂದು ಕಿವಿಮಾತು ಹೇಳಿದರು.

No Comments

Leave A Comment