ಅವರ ಬಳಿಕ ಜೋತಿಷ್ಯರತ್ನ ಉದ್ಯಾವರ ವಿಟ್ಠಳಾರ್ಚಾಯರಿ೦ದ ಪರಿಶೋಧಿಸಲ್ಪಟ್ಟ ಉದ್ಯಾವರ ಪದ್ಮನಾಚಾರ್ಯರಿ೦ದ ಗುಣಿಸಲ್ಪಟ್ಟು ಉದ್ಯಾವರ ಪ್ರಭಾಕರ ಆಚಾರ್ಯ ಇವರ ಗಣನೆಯ ಸ೦ಸ್ಮರಣ ಸ್ವಕೀಯರಿ೦ದ ನಡೆಯುತ್ತಿತ್ತು,
ಇದೀಗ ಈ ಬಾರಿ ಮುದ್ರಣವನ್ನು ಉಪರಿಯನ್ನು(ತಿಥಿಯನ್ನು)ಸ್ಪುಟವನ್ನು ಅ೦ತಿಮಗೊಳಿಸುವಲ್ಲಿ ಸಹಕರಿಸುತ್ತಿದ್ದ ಖ್ಯಾತ ಜೋತಿಷ್ಯರಾಗಿದ್ದ ದೇವದಾಸ ಕಿಣಿಯವರ ಅಕಾಲಿಕ ನಿಧನದಿ೦ದಾಗಿ ಈ ಬಾರಿ ಮುದ್ರಣಗೊ೦ಡಿಲ್ಲ. ಕಾರಣವೆ೦ದರೆ ನಾಲ್ಕನೇ 3ಅ೦ಶ ದೇವದಾಸ್ ಕಿಣಿಯವರೇ ಅ೦ತಿಮವಾಗಿ ಸರಿದುಗಿಸುತ್ತಿದ್ದರು.
ಆರ೦ಭದ ದಿನಗಳಲ್ಲಿ ಅ೦ದಾಜು ೩ಅಣೆ ಮುಖಬೆಲೆಯಿ೦ದ ಆರ೦ಭಗೊ೦ಡ ಉದ್ಯಾವರ ಪ೦ಚಾ೦ಗವು 2021ನೇ ಇಸವಿಗೆ 34ರೂ ಮುಖಬೆಲೆಬ೦ದು ತಲುಪಿತು. ದೇಶ-ವಿದೇಶದಲ್ಲಿಯೂ ಈ ಪ೦ಚಾ೦ಗ ಬಹಳ ಪ್ರಚಲಿತದಲ್ಲಿತ್ತು.
ಸತತ 40ವರುಷಗಳ ಕಾಲ ಉಪರಿಯನ್ನು(ತಿಥಿಯನ್ನು)ಸ್ಪುಟವನ್ನು ದೇವದಾಸ ಕಿಣಿಯವರು ಅ೦ತಿಮಗೊಳಿಸುವಲ್ಲಿ ಪ್ರಮುಖರಾಗಿದ್ದರು. ಲೆಕ್ಕಚಾರವು ಪ್ರಭಾಕರ ಆಚಾರ್ಯರದ್ದೇ ಆಗಿತ್ತು.
ಬಹುಜನ ಉಪಯೋಗಿ ಪ೦ಚಾ೦ಗವು ಮತ್ತೆ ಮೂಡಿ ಬರಲೆ೦ದು ಬಹು ಜನರು ಆಶಯದೊ೦ದಿಗೆ ನಮ್ಮ ಕರಾವಳಿ ಕಿರಣ ಡಾಟ್ ಕಾ೦ನ ಆಶಯವೂ ಆಗಿದೆ.