ಉಡುಪಿ ರಥಬೀದಿಯ ಮಹತೋಭಾರ ಮಹಾ ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಫೆ.28ರಿಂದ ಮಾ.7ರ ತನಕ ನಡೆಯಲಿದೆ.
ಫೆ.28ರ ರಾತ್ರಿ ಬಲಿ, ಮೃತ್ತಿಕಾ ಸಂಗ್ರಹ, ಅಂಕುರಾರೋಪಣ, ಮಾ.1ರ ಬೆಳಗ್ಗೆ ಧ್ವಜಾರೋಹಣ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಬಲಿ, ರಾತ್ರಿ 10ಕ್ಕೆ ಮಹಾ ರಂಗಪೂಜೆ ನಡೆಯಲಿದೆ.
ಮಾ.2ರಂದು ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಬಲಿ, ಕಟ್ಟೆ ಪೂಜೆ, ಮಾ.4ರಂದು ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾವಂಜೆ, ರಾತ್ರಿ ಬಲಿ, ಕಟ್ಟೆ ಪೂಜೆ, ಮಾ.5ರಂದು ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಬೆಳಗ್ಗೆ 11.45ಕ್ಕೆ ರಥೋರೋಹಣ, ಸಂಜೆ 5.30ಕ್ಕೆ ರಥೋತ್ಸವ, ಓಲಗ ಮಂಟಪ ಪೂಜೆ, ರಾತ್ರಿ ಭೂತ ಬಲಿ, ಶಯನ ಮಂಟಪ ಪೂಜೆ, ಶಯನೋತ್ಸವ, ಕವಾಟ ಬಂಧನ, ಮಾ.6ರಂದು ಬೆಳಗ್ಗೆ ಕವಾಟೋದ್ಘಾಟನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಕಟ್ಟೆಪೂಜೆ, ಅವರತ ಸ್ನಾನ, ಪೂರ್ಣಾಹುತಿ, ಧ್ವಜಾವರೋಹಣ,ಮಹಾಮಂತ್ರಾಕ್ಷತೆ, ಮಾ.7ರಂದು ಬೆಳಗ್ಗೆ ಸಂಪ್ರೋಕ್ಷಣೆ, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾ.1ರಂದು ಸಂಜೆ 4.30ರಿಂದ 5.30ರ ತನಕ ದಾಮೋದರ ಸೇರಿಗಾರ ಮತ್ತು ಕಾಲೇಜು ಬಳಗದಿಂದ ಸ್ಯಾಕ್ರೋಫೋನ್ ವಾದನ, ಅರ್ಥೈಸುವ 7ರಿಂದ ಕೋಟೇಶ್ವರ ಮಹಿಳಾ ಯಕ್ಷ ಬಳಗದಿಂದ ಯಕ್ಷಗಾನ ತಾಳಮದ್ದಳ (ಶ್ಯಮಂತಕೋಪಾಖ್ಯಾನ), ಮಾ.2ರಂದು ಸಂಜೆ 4.30ರಿಂದ ಪಾಡಿಗಾರು ಲಕ್ಷ್ಮೀ ಕುಳಿತುಕ ನಾರಾಯಣ ಉಪಾಧ್ಯಾಯ ಮತ್ತು ಹೈಕೋ ಬಳಗದಿಂದ ಭಕ್ತಿ ಸಂಗೀತ, ಸಂಜೆ 7ರಿಂದ ಸರಕಾರಿ ಶ್ರೀಯಕ್ಷ ವಿಶ್ವ ಬಳಗದಿಂದ ಶ್ರೀರಾಮಾರ ಮೇಧ ಯಕ್ಷಗಾನ, ಮಾ.3ರಂದು ಸಂಜೆ 4.30ರಿಂದ ಏಾ ಚೇತನಾ ರಾವ್ ನಾವು ಪಡುಬಿದ್ರಿ ಅವರಿಂದ ವೀಣಾವಾದನ, ಸಂಜೆ 7ರಿಂದ ಕುಂಜಾರುಗಿರಿ ಬಳಗದಿಂದ ಶ್ರೀರಾಮದರ್ಶನ ಯಕ್ಷಗಾನ, ಪ್ರಧ ಮಾ.4ರಂದು ಸಂಜೆ 4.30ಕ್ಕೆ ರುಕ್ಕಿಣಿ ಹಂಡೆ ಅವರಿಂದ ಭಕ್ತ ಮಾರ್ಕಾಂಡೇಯ ಹರಿಕಥೆ, ಸಂಜೆ 7ಕ್ಕೆ ಶ್ರೀರಾಧಾಕೃಷ್ಣ ನೃತ್ಯನಿಕೇತನದಿಂದ ಭರತನಾಟ್ಯ, ಮಾ.5ರಂದು ಸಂಜೆ 5.30ರಿಂದ ಮಾಧವ ಎಸ್. ಭಟ್ ಅವರಿಂದ ಶಾಸ್ತ್ರೀಯ ಸಂಗೀತ, ಸಂಜೆ 7ರಿಂದ ದರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ನವರಿಂದ ನೃತ್ಯ ವೈವಿಧ್ಯ ಪ್ರದರ್ಶನ ನಡೆಯಲಿದೆ ಎ೦ದು ದೇವಾಲಯದ ಪ್ರಕಟಣೆ ತಿಳಿಸಿದೆ.