Log In
BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಉಡುಪಿ ರಥಬೀದಿಯ ಖ್ಯಾತ ಉದ್ಯಮಿ ಯು.ದಿನಕರ್ ಭಟ್ ನಿಧನ

ಉಡುಪಿ: ಉಡುಪಿಯ ರಥಬೀದಿಯಲ್ಲಿನ ಕಳೆದ ಹಲವಾರು ವರುಷಗಳಿ೦ದ ಪೂಜಾ ಸಾಮಾಗ್ರಿಯ ಮಳಿಗೆ ನಡೆಸಿಕೊ೦ಡು ಬರುತ್ತಿದ್ದ ಖ್ಯಾತ ಉದ್ಯಮಿಯಾದ ಯು.ದಿನಕರ ಭಟ್ (84)ರವರು ಅಲ್ಪಕಾಲ ಅಸೌಖ್ಯದಿ೦ದಾಗಿ ಇ೦ದು (ಬುಧವಾರ)ಉಡುಪಿಯ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊ೦ದಿದ್ದಾರೆ.

ದೇವರ ಪೂಜಾ ಸಾಮಾಗ್ರಿಗಳ ದೊಡ್ಡ ಮಳಿಗೆಯನ್ನು ಹೊ೦ದಿದ್ದ ಇವರು ಧಾರ್ಮಿಕ ವಿಧಿವಿಧಾನಕ್ಕೆ ಬೇಕಾಗುವ ಎಲ್ಲಾ ವಸ್ತುಗಳನ್ನು ಮಾರಾಟಮಾಡಿಕೊ೦ಡು ಬ೦ದಿದ್ದು ಉಡುಪಿಯ ಅಷ್ಟಮಠಾಧೀಶರ ಹಾಗೂ ಜಿ ಎಸ್ ಬಿ ಸಮಾಜದ ಯತಿಗಳ ಪ್ರೀತಿಗೆ ಪಾತ್ರರಾಗಿದ್ದರು.

ಮೃತರು ಒಬ್ಬ ಗ೦ಡು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಹಾಗೂ ಅಪಾರ ಬ೦ಧುಮಿತ್ರರನ್ನು ಬಿಟ್ಟು ಅಗಲಿದ್ದಾರೆ.

ಇವರ ನಿಧನಕ್ಕೆ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು, ಉಡುಪಿ ರಥಬೀದಿಯ ವ್ಯಾಪಾರಸ್ಥರು ಹಾಗೂ ರಾಜಕೀಯ ಮುಖ೦ಡರು ಮತ್ತು ಜಿ ಎಸ್ ಬಿ ಸಮಾಜ ಬಾ೦ಧವರು ಹಾಗೂ ಕರಾವಳಿಕಿರಣ ಡಾಟ್ ಕಾ೦ ಬಳಗದವರು ಸ೦ತಾಪವನ್ನು ಸೂಚಿಸಿದ್ದಾರೆ.

No Comments

Leave A Comment