Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶಾಲೆ ಬಿಡ್ತೀವಿ, ಹಿಜಾಬ್ ಬಿಡಲ್ಲ ಎಂದು ಪಟ್ಟು ಹಿಡಿದ ಶಿವಮೊಗ್ಗದ 13 ವಿದ್ಯಾರ್ಥಿನಿಯರು: ಪರೀಕ್ಷೆ ಬರೆಯದೆ ಹೊರಬಂದ ಮಕ್ಕಳು

(ಸಾಂದರ್ಭಿಕ ಚಿತ್ರ)ಶಿವಮೊಗ್ಗ/ಬೆಂಗಳೂರು: ಹಿಜಾಬ್ ತೆಗೆಯುವುದಿಲ್ಲ, ಪರೀಕ್ಷೆ ಬರೆಯುವುದಿಲ್ಲ ಎಂದು ಶಿವಮೊಗ್ಗದಲ್ಲಿ 13 ವಿದ್ಯಾರ್ಥಿನಿಯರು ಪಟ್ಟು ಹಿಡಿದ ಘಟನೆ ಇಂದು ಸೋಮವಾರ ನಡೆದಿದೆ.

ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಹಿಜಾಬ್ ವಿವಾದ ಮಧ್ಯೆ ಇಂದು ಸರ್ಕಾರದ ಆದೇಶ ಪ್ರಕಾರ 9 ಮತ್ತು 10ನೇ ತರಗತಿಗೆ ಶಾಲೆ ಪುನಾರಂಭವಾಗಿದೆ. ಇಂದು ಗೊಂದಲ, ಆತಂಕ, ಭಯದ  ನಡುವೆಯೇ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿರುವುದು ಕಂಡುಬಂತು. ಪೋಷಕರು ಕೂಡ ಮಕ್ಕಳನ್ನು ಆತಂಕ ಮಧ್ಯೆ ಶಾಲೆಗೆ ಕಳುಹಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಿತ್ತು. ಆದರೆ ಹಲವು ಜಿಲ್ಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದು ಹಿಜಾಬ್ ಧರಿಸಿಯೇ ಬಂದಿದ್ದಾರೆ. ಶಿವಮೊಗ್ಗದಲ್ಲಿ 13 ಮಂದಿ ವಿದ್ಯಾರ್ಥಿನಿಯರು ಒಂದು ಹೆಜ್ಜೆ ಮುಂದೆ ಹೋಗಿ ಹಿಜಾಬ್ ತೆಗೆಯೋದೇ ಇಲ್ಲ, ಪರೀಕ್ಷೆಯೂ ಬರೆಯುವುದಿಲ್ಲ ಎಂದರು.

ತರಗತಿಯೊಳಗೆ ಹಿಜಾಬ್ ತೆಗೆಯುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಾಗ ಶಿಕ್ಷಕರು ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದರು. ಆಗ ವಿದ್ಯಾರ್ಥಿನಿಯರು ತರಗತಿಯ ಹೊರಗೆ ಬಂದು ಪರೀಕ್ಷೆ ಬರೆಯಲು ಬಿಡದಿದ್ದರೆ ಹೋಗಿ ಹಿಜಾಬ್ ಅಂತೂ ತೆಗೆಯುವುದಿಲ್ಲ ಎಂದರು.

ಇನ್ನು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಇಂದು ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭ ದಿನ ಹಿಜಾಬ್ ಧರಿಸಿಯೇ ವಿಧಾನಸಭೆಗೆ ಆಗಮಿಸಿದ್ದಾರೆ.

No Comments

Leave A Comment