Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ವ್ಯಾಲೆಂಟೈನ್ಸ್ ಡೇ: ಪ್ರೇಮಿಗಳನ್ನು ತಡೆಯಲು ಲಾಠಿ ಪೂಜೆ! ಸ್ಥಳದಲ್ಲೇ ಮದ್ವೆ!!

ಭೋಪಾಲ್: ಸೋಮವಾರ ಪ್ರೇಮಿಗಳ ದಿನದಂದು ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪ್ರೇಮಿಗಳನ್ನು ತಡೆಯಲು ಶಿವಸೇನೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಲಾಠಿಗಳಿಗೆ ಪೂಜೆ ಸಲ್ಲಿಸಲಾಯಿತು.

ಯಾರಾದರೂ ಏನಾದರೂ ಪ್ರೇಮಿಗಳು ಪಾರ್ಕ್ ನಲ್ಲಿ ಕಂಡುಬಂದರೆ, ಲಾಠಿಯಿಂದ ಅವರನ್ನು ದಂಡಿಸುತ್ತೇವೆ ಎಂದು ಶಿವಸೇನಾ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಪ್ರೀತಿಯ ಜೋಡಿಗಳಿಗೆ ಪಾಠ ಕಲಿಸಲು ಶಿವಸೇನೆ ಕಾರ್ಯಕರ್ತರು ಕಾಳಿಕಾ ಶಕ್ತಿ ಪೀಠದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ, ಪ್ರೇಮಿಗಳ ದಿನವನ್ನು ಆಚರಿಸುವ ಯುವಕರಿಗೆ ಎಚ್ಚರಿಕೆ ನೀಡಿದರು. ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತೀಕ ಎಂದು ಕರೆದಿರುವ ಶಿವಸೇನೆ ವ್ಯಾಲೆಂಟೈನ್ಸ್ ಡೇ ವಿರೋಧಿಸುವುದಾಗಿ ಘೋಷಿಸಿದೆ.

ಪ್ರೇಮಿಗಳ ದಿನವನ್ನು ವಿರೋಧಿಸಿದ ಶಿವಸೇನೆ ಕಾರ್ಯಕರ್ತರು, ನಾಳೆ ಲಾಠಿಗಳೊಂದಿಗೆ ನಗರದ ವಿವಿಧ ಭಾಗಗಲ್ಲಿ ಸುತ್ತಲಿದ್ದೇವೆ. ಪ್ರೇಮಿಗಳ ದಿನ ಆಚರಿಸುವುದು ಕಂಡು ಬಂದರೆ ಯುವಕ-ಯುವತಿಯರಿಗೆ ಸ್ಥಳದಲ್ಲೇ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಭೋಪಾಲ್‌ನಲ್ಲಿ ಶಿವಸೇನೆಯು ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಪಬ್, ರೆಸ್ಟೋರೆಂಟ್, ಹೋಟೆಲ್ ಗಳಿಗೆ ಎಚ್ಚರಿಕೆ ನೀಡಿದೆ. ದೇಶದಲ್ಲಿ ಶಿವಸೇನೆ, ಭಜರಂಗದಳ ಸೇರಿದಂತೆ ಹಲವು ಸಂಘಟನೆಗಳು ವ್ಯಾಲೆಂಟೈನ್ಸ್ ಡೇ ಆಚರಿಸುವುದನ್ನು ವಿರೋಧಿಸುತ್ತಿವೆ.

No Comments

Leave A Comment