Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶ್ರೀರಾಮ ಮ೦ದಿರದ 33ನೇ ವರುಷದ ಪುನರ್ ಪ್ರತಿಷ್ಠಾ ವರ್ಧ೦ತಿ- ಶ್ರೀದೇವರಿಗೆ 70ಸಾವಿರ ಕ್ಕೂ ಹೆಚ್ಚಿನ ಲಾಡ್ಡುಸೇವೆ

ಉಡುಪಿ:ದೊ೦ಡರ೦ಗಡಿಯ ಶ್ರೀರಾಮ ಮ೦ದಿರದ 33ನೇ ವರುಷದ ಪುನರ್ ಪ್ರತಿಷ್ಠಾ ವರ್ಧ೦ತಿ ಹಾಗೂ 128ನೇ ಭಜನಾ ಮ೦ಗಲೋತ್ಸವವು 2ನೇ ಫೆಬ್ರವರಿಯಿ೦ದ ಮೊದಲ್ಗೊ೦ಡು 13ರ ಭಾನುವಾರದ ಮು೦ಜಾನೆಯ ವರೆಗೆ ವಿಜೃ೦ಭಣೆಯಿ೦ದ ಸಕಲ ಧಾರ್ಮಿಕ ವಿಧಿವಿಧಾನಗಳೊ೦ದಿಗೆ ಸ೦ಪನ್ನಗೊ೦ಡಿತು.

ಈ ಸ೦ದರ್ಭದಲ್ಲಿ ನೂರಾರು ಭಕ್ತರಿಂದ ಶ್ರೀ ರಾಮ ದೇವರಿಗೆ ಹರಕೆಯ ರೂಪದಲ್ಲಿ 70ಸಾವಿರ ಕ್ಕೊ ಹೆಚ್ಚಿನ ಲಾಡು ಸೇವೆ ಅರ್ಪಿಸಲಾಯಿತು.

ಇಂದು ದೇವರ ಸನ್ನಿಧಿಯಲ್ಲಿ (ಭೋಜನದ ವೇಳೆ ) ಪ್ರಸಾದ ರೂಪದಲ್ಲಿ ಲಾಡುಗಳ ವಿತರಣೆ ನಡೆಯಿತು. ಸಾವಿರಾರು ಮ೦ದಿ ಭಕ್ತರು ಈ ಲಡ್ಡುಪ್ರಸಾದವನ್ನು ಸ್ವೀಕರಿಸಿ ಪಾವನರಾದರು.

ದೇವಳದ ಪ್ರಧಾನ ಅರ್ಚಕರಾದ  ಕಾಶೀನಾಥ್ ಭಟ್ ಕಲ್ಯಾಣಪುರ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು ,   ರಾಮಮಂದಿರದ  ಅಧ್ಯಕ್ಷರಾದ  ಜಯರಾಮ ನಾಯಕ್ ,  ಮಹೇಶ  ಭಟ್ , ರಾಘವೇಂದ್ರ  ಕಿಣೆ ,  ಗಣೇಶ ಶೆಣೈ , ಸಂದೀಪ ಶೆಣೈ , ಜಿ ಎಸ್ ಬಿ  ಯುವಕ , ಮತ್ತು ಮಹಿಳಾ ಮಂಡಳಿಯ ಸದ್ಯಸರು ಉಪಸ್ಥರಿದ್ದರು

No Comments

Leave A Comment