ಐಪಿಎಲ್ ಹರಾಜು ಪ್ರಕ್ರಿಯೆ ವೇಳಿ ಕುಸಿದು ಬಿದ್ದ ಹರಾಜುದಾರ ಹಗ್ ಎಡ್ಮೀಡ್ಸ್!
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಆಟಗಾರರ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹರಾಜುದಾರರಲ್ಲೊಬ್ಬರಾದ 60 ವರ್ಷದ ಹಗ್ ಎಡ್ಮೀಡ್ಸ್ ಹರಾಜು ಪ್ರಕ್ರಿಯೆಯ ಮಧ್ಯೆ ಕುಸಿದು ಬಿದ್ದ ಕಾರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಅವರನ್ನು ವೈದ್ಯರು ಪರೀಕ್ಷಿಸಿದ್ದು ಅವರು ಆರೋಗ್ಯ ಸ್ಥಿರವಾಗಿದೆ. ರಕ್ತದೊತ್ತಡದಿಂದಾಗಿ ಅವರು ಕುಸಿದು ಬಿದ್ದಿದ್ದಾರೆ. ಸಂಪೂರ್ಣ ತಪಾಸಣೆಗೆ ಒಳಗಾದ ನಂತರ ನಾವು ಇನ್ನಷ್ಟು ಮಾಹಿತಿ ನೀಡುತ್ತೇವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪ್ರಪಂಚದಾದ್ಯಂತ 2,700ಕ್ಕೂ ಹೆಚ್ಚು ಹರಾಜುಗಳನ್ನು ಎಡ್ಮೀಡ್ಸ್ ನಡೆಸಿಕೊಟ್ಟಿದ್ದಾರೆ.