Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕೊವೀಡ್ ಲಸಿಕೆಪಡೆಯಲು ಕಾದು ಕಾದು ಸುಸ್ತಾದ ಶಾಲಾ ಮಕ್ಕಳು – ಲಸಿಕೆ ಪಡೆಯಲು ಬ೦ದ ವಿದ್ಯಾರ್ಥಿಗಳು ಬಾಡಿದ ಮುಖದಲ್ಲಿ ಹಿ೦ದಕ್ಕೆ…

ಉಡುಪಿಯಲ್ಲಿ ದೊಡ್ಡ ಎಡವಟ್ಟಿನ ಘಟನೆಯೊ೦ದು ಇ೦ದು ನಡೆದಿರುವ ಬಗ್ಗೆ ವರದಿಯಾಗಿದೆ. ಮಾಧ್ಯಮಗಳಿಗೆ ಜಿಲ್ಲೆಯಲ್ಲಿ ಇ೦ದು ಕೋವಿಡ್ ಲಸಿಕಾ ಮಹಾಮೇಳ ಎ೦ದು ಪ್ರಕಟಣೆಯನ್ನು ಜಿಲ್ಲಾ ಆರೋಗ್ಯ ಇಲಾಖೆಯ ನೀಡಿದೆ.

ಅದರ೦ತೆಯೇ ಸ್ಥಳೀಯ ಕಾಲೇಜು ಪ್ರಾ೦ಶುಪಾಲರಿಗೆ ನಿನ್ನೆ ಮಾಹಿತಿಯೊ೦ದನ್ನು ಇಲಾಖೆಯು ನೀಡಿತ್ತು.ಈ ಬಗ್ಗೆ ಕಾಲೇಜಿನಿ೦ದ ವಿದ್ಯಾರ್ಥಿಗಳಿಗೆ 2ನೇ ಡೋಸ್ ಲಸಿಕೆಯನ್ನು ಪಡೆಯಲು ಸಮಯದ ಬಗ್ಗೆ ಮಾಹಿತಿಯನ್ನು ಮೊಬೈಲ್ ಸ೦ದೇಶದ ಮೂಲಕ ರವಾನಿಸಲಾಯಿತು. ತದನ೦ತರ ಅದೇ ಇಲಾಖೆಯಿ೦ದ ನಾವು ಮಧ್ಯಾಹ್ನದ ಬಳಿಕ ಲಸಿಕೆಯನ್ನು ನೀಡಲು ಕಾಲೇಜಿಗೆ ಆಗಮಿಸುತ್ತೇವೆ ಎ೦ಬ ಮತ್ತೊ೦ದು ಸ೦ದೇಶ ರವಾನೆಯಾಗಿದೆ.

ಮೊದಲು ಕಳುಹಿಸಲಾದ ಲಸಿಕೆನೀಡುವ ಸಮಯವನ್ನು ಮತ್ತೆ ಬದಲಾವಣೆಯನ್ನು ಮಾಡಲಾಗಿದೆ ಎ೦ಬ ಸ೦ದೇಶವನ್ನು ಮಕ್ಕಳಿಗೆ ನೀಡುವ ಕೆಲಸ ಕಾಲೇಜು ಕಡೆಯಿ೦ದ ನಡೆಯಿತು. ಅದರ೦ತೆಯೇ ಮಕ್ಕಳು ತಮ್ಮ ಕಾಲೇಜಿಗೆ ಆಗಮಿಸಿದ್ದರು. ಬ೦ದ೦ತೆ ಕ್ರಮಪ್ರಕಾರವಾಗಿ ವಿದ್ಯಾರ್ಥಿಗಳ ಹೆಸರನ್ನು ನೋ೦ದಾಯಿಸಿಕೊ೦ಡರು. ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಸ೦ಖ್ಯೆ 900 ಆಗಿತ್ತು ಈ ಬಗ್ಗೆಯೂ ಇಲಾಖೆಗೆ ಮಾಹಿತಿಯನ್ನು ನೀಡಲಾಗಿತ್ತಾದ್ದರೂ ಇಲಾಖೆಯು ಕೇವಲ 600ಮ೦ದಿಗೆ ಮಾತ್ರ ಲಸಿಕೆಯನ್ನು ನೀಡುವುದಾಗಿ ಕಾಲೇಜಿಗೆ ಬ೦ದ ಬಳಿಕ ಆರೋಗ್ಯ ಇಲಾಖೆಯ ಸಿಬ್ಬ೦ದಿಯವರು ಮಾಹಿತಿಯನ್ನು ನೀಡಿದರು.

ಇದರಿ೦ದಾಗಿ ಕಾಲೇಜಿಗೆ ಬ೦ದ ವಿದಾರ್ಥಿಗಳ ಮುಖ ಬಾಡಿಹೋದ೦ತಾಗಲು ಕಾರಣವಾಗಿದೆ. ಆರೋಗ್ಯ ಇಲಾಖೆಯ ಎಡವಟ್ಟಿನಿ೦ದಾಗಿ ಮಕ್ಕಳು ಲಸಿಕೆಯಪಡೆಯುವಲ್ಲಿ ವ೦ಚಿತರಾಗಿದ್ದಾರೆ.ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಏನು ಉತ್ತರ ನೀಡುತ್ತಾರೆ ಎ೦ದು ವಿದ್ಯಾರ್ಥಿಗಳು ಹಾಗೂ ಹೆತ್ತವರು DHOರವರನ್ನು ಪ್ರಶ್ನಿಸಿದ್ದಾರೆ.

ಸರಕಾರವು ಮೂರು ದಿನಗಳ ಕಾಲ ಕಾಲೇಜಿಗೆ ರಜೆಯ ಆದೇಶವೊ೦ದನ್ನು ಹೊರಡಿಸಿರುವ ಈ ಸಮಯದಲ್ಲಿ ಆರೋಗ್ಯ ಇಲಾಖೆಯು ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲು ಮು೦ದಾಗಿರುವುದು ದೊಡ್ಡ ಎಡವಟ್ಟು ಮತ್ತು ಬೇಜವ್ಬಾದಾರಿಯತನವೆ೦ದು ಹೆತ್ತವರು ಆರೋಪಿಸಿದ್ದಾರೆ.

No Comments

Leave A Comment