BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಮವಸ್ತ್ರ ಮೊದಲು ಪರಿಚಯಿಸಿದಾಗ ಹಿಜಾಬ್ ಧರಿಸಲು ಅನುಮತಿಸಲಾಗಿತ್ತು: ಎಂ.ರಘುಪತಿ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ಧರಿಸುವ ಸಂಬಂಧ ತೀವ್ರ ಚರ್ಚೆಯಾಗುತ್ತಿದೆ, ಇದೇ ವೇಳೆ 1980ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಸಮವಸ್ತ್ರ ಪರಿಚಯಿಸಿದ ಬಗ್ಗೆ ಮಾಜಿ ಸಚಿವ ಎಂ.ರಘುಪತಿ ಭಟ್ ವಿವರಿಸಿದ್ದಾರೆ.

ಹೆಗಡೆ ಅವರ ಸಂಪುಟದಲ್ಲಿ ಎಂ. ರಘುಪತಿ ಶಿಕ್ಷಣ ಮಂತ್ರಿಯಾಗಿ ಕೆಲಸ ಮಾಡಿದ್ದರು. ರಾಜ್ಯದಲ್ಲಿ ಸಮವಸ್ತ್ರ ಪರಿಚಯಿಸಿದಾಗ ಹಿಜಾಬ್ ವಿಷಯವನ್ನು ಪ್ರಸ್ತಾಪಿಸಲಾಗಿತ್ತು, ಅಂದಿನ ಜನತಾ ಪಕ್ಷದ ಸರ್ಕಾರವೂ ಮುಂಸ್ಲಿಂ ವಿದ್ಯಾರ್ಥಿಗಳಿಗೆ ಸ್ಕಾರ್ಪ್ ಧರಿಸಲು ವಿನಾಯಿತಿ ನೀಡಿತು ಎಂದು ರಘುಪತಿ ತಿಳಿಸಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಘುಪತಿ, 1985ರಲ್ಲಿ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಶಿಕ್ಷಣ ಸಚಿವನಾಗಿದ್ದಾಗ ಸರಕಾರಿ ಶಾಲೆ, ಮಹಾನಗರ ಪಾಲಿಕೆ, ಪುರಸಭೆ, ಪಂಚಾಯತ್‌ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡುವ ಯೋಜನೆ ಜಾರಿಗೆ ತಂದಿದ್ದೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಮವಸ್ತ್ರವನ್ನು ಪರಿಚಯಿಸಲಾಯಿತು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ನೀಡಲಾಯಿತು.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ನನ್ ಗಳು ಹೆಬಿಟ್  ಧರಿಸಿ ಸರ್ಕಾರಿ ಸಂಸ್ಥೆಗಳಿಗೆ ಬರುವುದು ಯಾವುದೇ ಸಮಸ್ಯೆಯಲ್ಲ, ಏಕೆಂದರೆ ಇದರಿಂದ ಶಾಲಾ-ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂದು ನಾವು ಸ್ಪಷ್ಟವಾಗಿ ಸೂಚಿಸಿದ್ದೇವೆ. ಯಾವುದೇ ರಾಜಕೀಯ ಪಕ್ಷಗಳು ಇದನ್ನು ಸಮಸ್ಯೆಯಾಗಿಸಿ ಶಾಲಾ-ಕಾಲೇಜುಗಳ ವಾತಾವರಣವನ್ನು ಹಾಳು ಮಾಡಬಾರದು ಎಂದು ಅವರು ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ. “ಶಿಕ್ಷಣ ಸಂಸ್ಥೆಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಘುಪತಿ,  ಶಾಲೆಗಳ ನಂತರ ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವುದನ್ನು ಆರಂಭಿಸಲಾಯಿತು. ಹಿಜಾಬ್ ಸಮಸ್ಯೆಯನ್ನು ಅಂದಿನ ರೀತಿಯಲ್ಲಿ ಚರ್ಚಿಸಲಾಯಿತು ಮತ್ತು ಬಗೆಹರಿಸಲಾಯಿತು. ಹಿಜಾಬ್ ಅನ್ನು ಧರ್ಮವು ಕಡ್ಡಾಯಗೊಳಿಸಿರುವುದರಿಂದ, ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಅದನ್ನು ಧರಿಸಬಹುದು ಎಂದು ಹೇಳಿದ್ದಾರೆ.

ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡುವ ನಿರ್ಧಾರದಿಂದ ಅಂದಿನ ದಿನಗಳಲ್ಲಿ ಸರ್ಕಾರಕ್ಕೆ ವಾರ್ಷಿಕ ಸುಮಾರು 40 ಕೋಟಿ ರೂ. ಖರ್ಚು ಬರುತ್ತಿತ್ತು.  ಜನತಾ ಪಕ್ಷದಲ್ಲಿದ್ದ ನಾವು ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಕಾಂಗ್ರೆಸ್ ಸಚಿವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೆ ಎಂದು ರಘುಪತಿ ಸ್ಮರಿಸಿದರು.

ಜೈನ್ ಮತ್ತು ಇತರೆ ಧರ್ಮದ ಮಹಿಳೆಯರು ಧರಿಸುವಂತೆ ಕ್ರಿಶ್ಚಿಯನ್ ಮಹಿಳೆಯರು ತಲೆಗೆ ಹೆಬಿಟ್ ಧರಿಸಿಕೊಳ್ಳುತ್ತಾರೆ, ಅವರಿಗೂ ಕೂಡ ನಾವು ವಿನಾಯಿತಿ ನೀಡಿದ್ದೇವು,  ಅಂದು 95 ಶಾಸಕರನ್ನು ಹೊಂದಿದ್ದ ಜನತಾ ಪಕ್ಷದ ಸರ್ಕಾರಕ್ಕೆ 18 ಶಾಸಕರ ಬಲವಿದ್ದ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು, ಆಗ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರಲಿಲ್ಲ ಎಂದು ರಘುಪತಿ ತಿಳಿಸಿದ್ದಾರೆ.

No Comments

Leave A Comment