Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ತನ್ನ ಮಗಳಿಗೆ ಭಾರತದ ಕ್ರೀಡಾಂಗಣದ ಹೆಸರಿಟ್ಟ ವೆಸ್ಟ್ ಇಂಡೀಸ್ ಕ್ರಿಕೆಟರ್

ಬೆಂಗಳೂರು: ವೆಸ್ಟ್ ಇಂಡೀಸ್ 2016ರ ಟಿ20 ವಿಶ್ವಕಪ್ ಅನ್ನು ಭಾರತದ ನೆಲದಲ್ಲಿ ತನ್ನ ಮುಡಿಗೇರಿಸಿಕೊಂಡಿತ್ತು. ಯಾರು ನಿರೀಕ್ಷಿಸದ ರೀತಿಯಲ್ಲಿ ಒಂದೇ ಓವರ್‌ನಲ್ಲಿ ಇಡೀ ಆಟದ ಗತಿಯೇ ಬದಲಾಯಿತು. ಅದಕ್ಕೆ ಕಾರಣ ವಿಂಡೀಸ್ ಕ್ರಿಕೆಟಿಗ ಕಾರ್ಲೋಸ್ ಬ್ರಾಥ್ ವೈಟ್. ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಯಿತು.

ಬೆನ್ ಸ್ಟೋಕ್ಸ್ ಎಸೆದ ಅಂತಿಮ ಓವರ್‌ನಲ್ಲಿ ಬ್ರಾಥ್‌ವೈಟ್ ಸತತ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ತಂಡಕ್ಕೆ T20 ವಿಶ್ವಕಪ್ ಅನ್ನು ತಂದುಕೊಡಲು ಯಶಸ್ವಿಯಾದರು. ಅಲ್ಲಿಯವರೆಗೂ ಬ್ರಾತ್‌ವೈಟ್ ಎಂದರೆ ಯಾರು ಎಂದು ತಿಳಿಯದ ಪ್ರಪಂಚಕ್ಕೆ ಒಮ್ಮೆಲೆ ಆ ಪಂದ್ಯದಲ್ಲಿ ಬ್ರಾಥ್‌ವೈಟ್ 10 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 34 ರನ್ ಗಳಿಸುವ ಮೂಲಕ ನನ್ನ ಹೆಸರು ಕಾರ್ಲೋಸ್ ಬ್ರಾಥ್‌ವೈಟ್ ಎಂದು ನೆನಪಿಡುವಂತೆ ಮಾಡಿದರು.

ಭಾರತದ ನೆಲದಲ್ಲಿ ವಿಶ್ವಕಪ್ ಗೆಲ್ಲಲು ಕಾರಣವಾದ ಮತ್ತು ಜಗತ್ತಿಗೆ ತನ್ನ ಹೆಸರು ಪರಿಚಯ ಮಾಡಿಕೊಟ್ಟ ಕ್ರೀಡಾಂಗಣದ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡರು. ಇದೇ ವಿಚಾರಕ್ಕೆ ಬ್ರಾಥ್‌ವೈಟ್ ಅವರು ವಿಶೇಷವಾಗಿ ಈಡನ್ ಗಾರ್ಡನ್ಸ್ ಅನ್ನು ಇಷ್ಟಪಡುತ್ತಾರೆ ಎಂದು ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ಈಡನ್ ಗಾರ್ಡನ್‍ ಮೇಲಿನ ಅಭಿಮಾನದ ನೆನಪಿಗಾಗಿ ತನ್ನ ಮಗುವಿಗೆ ‘ಈಡನ್’ ಎಂದು ನಾಮಕರಣ ಮಾಡಿದ್ದಾರೆ. ಫೆಬ್ರವರಿ 6 ರಂದು, ಕಾರ್ಲೋಸ್ ಬ್ರಾಥ್ವೈಟ್ ಪತ್ನಿ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಇದೇ ಖುಷಿಯಲ್ಲಿ ತನ್ನ ಮಗುವಿಗೆ ಈಡನ್ ಎಂದು ಹೆಸರಿಟ್ಟಿದ್ದೇನೆ ಎಂದು ಬ್ರಾಥ್‌ವೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿದ್ದಾರೆ.

ನನ್ನ ಮಗುವಿನ ಹೆಸರನ್ನು ನೆನಪಿಟ್ಟುಕೊಳ್ಳಿ.. ಈಡನ್ ರೋಸ್ ಬ್ರಾಥ್‌ವೈಟ್. ಹುಟ್ಟಿದ ದಿನಾಂಕ 2/6/22 . ನಾನು ನಿನ್ನನ್ನು ಯಾವಾಗಲೂ ಅಪ್ಪನಂತೆ ಪ್ರೀತಿಸುತ್ತೇನೆ ಮಗಳೇ. ಧನ್ಯವಾದಗಳು ಜೆಸ್ಸಿ ಪರ್ಪಲ್. ನೀನು ನನ್ನ ಜೀವನಕ್ಕೆ ಬಂದಿದ್ದು ನನ್ನ ಅದೃಷ್ಟ. ಖಂಡಿತವಾಗಿಯೂ ಈಡನ್ ರೋಸ್ ಬ್ರಾಥ್‌ವೈಟ್‌ಗೆ ನೀನು ಒಳ್ಳೆಯ ತಾಯಿಯಾಗಿರುತ್ತೀಯ ಎಂದು ಭಾವಿಸಿದ್ದೇನೆ. ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ

No Comments

Leave A Comment