Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

2008 ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ: 28 ಆರೋಪಿಗಳು ಖುಲಾಸೆ, 49 ಮಂದಿ ದೋಷಿ- ಕೋರ್ಟ್ ತೀರ್ಪು

ಗಾಂಧಿನಗರ: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ 77 ಆರೋಪಿಗಳ ಪೈಕಿ 28 ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತಿನ ವಿಶೇಷ ನ್ಯಾಯಾಲಯ, 49 ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

77 ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನ್ಯಾಯಾಲಯ ಪೂರ್ಣಗೊಳಿಸಿತ್ತು. ವಿಶೇಷ ನ್ಯಾಯಾಧೀಶ ಎ.ಆರ್. ಪಟೇಲ್ ಗುಜರಾತಿನಲ್ಲಿ 13 ವರ್ಷದ ಹಿಂದೆ ನಡೆದ ಅತ್ಯಂತ ಮಹತ್ವದ ಸರಣಿ ಸ್ಫೋಟ ಪ್ರಕರಣದ ತೀರ್ಪು ನೀಡಿದ್ದಾರೆ.

ಅಹಮದಾಬಾದ್ ನಲ್ಲಿ 2008ರಲ್ಲಿ  ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸುಮಾರು 56 ಜನರು ಸಾವನ್ನಪ್ಪಿದ್ದರು. 200 ಮಂದಿ ಗಾಯಗೊಂಡಿದ್ದರು. ಸುಮಾರು 13 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ವಿಶೇಷ ನ್ಯಾಯಾಲಯ ಮಂಗಳವಾರ ತನ್ನ ತೀರ್ಪನ್ನು ನೀಡಿದ್ದು, ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಈ ಹಿಂದೆ ಪ್ರಕರಣದ ತೀರ್ಪು ಪ್ರಕಟಿಸುವುದಾಗಿ ಹಲವು ಬಾರಿ ಸೂಚನೆ ನೀಡಲಾಗಿತ್ತು. ಆದರೆ, ಮುಂದೂಡಲಾಗಿತ್ತು.
2008ರ ಸರಣಿ ಸ್ಫೋಟದ ನಂತರ ಗುಜರಾತ್ ಪೊಲೀಸರು ನಗರದಲ್ಲಿ ಸರಣಿ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಅಲ್ಪಸಂಖ್ಯಾತ ಸಮುದಾಯದಿಂದ ಹಿಡಿದು ರಾಷ್ಟ್ರವ್ಯಾಪಿ ತೀವ್ರಗಾಮಿ ತಂಡಗಳ ಜಾಲದವರೆಗೂ ಭೇದಿಸಿದ್ದರು.

 2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರಾ ನಂತರದ ದಂಗೆಗಳಿಗೆ ಪ್ರತೀಕಾರವಾಗಿ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಗೆ ಸಂಬಂಧಿಸಿದ ಭಯೋತ್ಪಾದಕರು ಸ್ಫೋಟಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

No Comments

Leave A Comment