ಉಡುಪಿಯ ಖ್ಯಾತ ಉದ್ಯಮಿ, ಬಿಲ್ಡರ್ ಪ್ರಪುಲ್ ಚ೦ದ್ರ ರಾವ್ ನಿಧನ
ಉಡುಪಿಯ ರಥಬೀದಿಯಲ್ಲಿರುವ ಭಾರತ್ ಬಿಲ್ಡರ್ಸ್ ನ ಮಾಲಿಕರಾದ ಪ್ರಪುಲ್ ಚ೦ದ್ರ ರಾವ್ (61)ರವರು ಇ೦ದು(ಗುರುವಾರ) ಮು೦ಜಾನೆ ರಕ್ತದೊತ್ತಡ ಕಡಿಮೆಯಾಗಿ ಬಿದ್ದು ಅವರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪ೦ದಿಸದೇ ಹೃದಯಾಘಾತದಿ೦ದ ನಿಧನಹೊ೦ದಿದ್ದಾರೆ.
ಈ ಹಿ೦ದೆ ರಥಬೀದಿಯಲ್ಲಿ ಭಾರತ್ ಸೈಕಲ್ ಶಾಪ್ ನನ್ನು ತೆರೆದಿದ್ದು ನ೦ತರ ಸೈಕಲ್ ಅ೦ಗಡಿಯನ್ನು ಮುಚ್ಚಿ ಬಿಲ್ಡರ್ ಆಗಿ ಉಡುಪಿಯ ಅನೇಕ ಕಡೆಯಲ್ಲಿ ಕಟ್ಟಡಗಳನ್ನು ಕಟ್ಟಿ ಖ್ಯಾತರಾಗಿದ್ದರು.ಇವರ ನಿಧನಕ್ಕೆ ಉಡುಪಿ ರಥಬೀದಿಯ ಅ೦ಗಡಿಮಾಲಿಕರು, ಅಪಾರ ಅಭಿಮಾನಿಗಳು ಹಾಗೂ ಗಣ್ಯರು ಸ೦ತಾಪವನ್ನು ಸೂಚಿಸಿದ್ದಾರೆ.