BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

‘ಅಮಿತಾಭ್ ಬಚ್ಚನ್ ಒಂದು ಗೊಂಬೆ, ಚಿತ್ರರಂಗದ ದಂತಕಥೆ’: ರಶ್ಮಿಕಾ ಮಂದಣ್ಣ

ಮುಂಬೈ: ಸ್ಯಾಂಡಲ್ ವುಡ್ ನಿಂದ ಸಿನಿ ಪಯಣ ಆರಂಭಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇಂದು ಬಾಲಿವುಡ್ ಗೂ ಪಾದರ್ಪಣೆ ಮಾಡಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಮಿಷನ್ ಮಜ್ನು ಮತ್ತು ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದಾರೆ.

ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ ಮಲ್ಹೋತ್ರಾಗೆ ರಶ್ಮಿಕಾ ಮಂದಣ್ಣ ಜೊತೆಯಾಗಿದ್ದಾರೆ. ಈ ಸಿನಿಮಾ ಮೇ 13ರಂದು ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಇನ್ನು ಗುಡ್ ಬೈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್ ಒಂದು ಗೊಂಬೆ. ಒಬ್ಬ ಅದ್ಭುತ ವ್ಯಕ್ತಿ. ಚಿತ್ರರಂಗದ ದಂತಕಥೆ. ಪ್ರತಿಯೊಬ್ಬರೂ ಆರಾಮಾಗಿರುವಂತಹ ಭಾವನೆಯನ್ನು ಅವರು ನೀಡುತ್ತಾರೆ. ಪ್ರತಿಯೊಂದು ದೃಶ್ಯದ ಚಿತ್ರೀಕರಣವನ್ನು ತಮಾಷೆ ಮೂಲಕ ಅಧ್ಭುತವಾಗಿಸುತ್ತಾರೆ. ಅವರ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆಯೇ ಎಂದು ಹೇಳಿದ್ದಾರೆ.

ಗುಡ್ ಬೈ ಸಿನಿಮಾವನ್ನು ವಿಕಾಸ್ ಬಹ್ಲ್ ನಿರ್ದೇಶಿಸಿದ್ದಾರೆ ಮತ್ತು ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.

No Comments

Leave A Comment