BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಆಸ್ಟ್ರೇಲಿಯಾ ಓಪನ್ 2022: ಕ್ರೇಜಿಕೊವಾ ಜೋಡಿಗೆ ಮಹಿಳೆಯರ ಡಬಲ್ಸ್ ಪ್ರಶಸ್ತಿ

ಮೆಲ್ಬೋರ್ನ್: ಚೆಕ್ ಗಣರಾಜ್ಯದ ಅಗ್ರ ಶ್ರೇಯಾಂಕದ ಕತ್ರಿನಾ ಸಿನಿಕೋವಾ, ಬಾರ್ಬೊರಾ ಕ್ರೆಜ್ಕೋವಾ ಅವರು ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಮಹಿಳೆಯರ ಡಬಲ್ಸ್ ಟ್ರೋಫಿಯನ್ನು ಗೆದ್ದರು.

ಭಾನುವಾರ ನಡೆದ ಫೈನಲ್‌ನಲ್ಲಿ ಕಜಕಿಸ್ತಾನದ ಅನ್ನಾ ಡಿನಿಲಿನಾ ಬ್ರೆಜಿಲ್‌ನ ಬೀಟ್ರಿಸ್ ಹದ್ದದ್ ಮಯ್ಯ ಅವರನ್ನು ಸೋಲಿಸಿ 6-7, (3-7), 6-4, 6-4 ಅಂತರದಲ್ಲಿ ಗೆದ್ದರು. ಕ್ರೆಜಿಕೋವಾ ಜೋಡಿಗೆ ಇದು ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಆಗಿದೆ. 2 ಗಂಟೆ 42 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಜೆಕ್ ಜೋಡಿ ಸುಲಭವಾಗಿ ಗೆಲುವು ಸಾಧಿಸಿದೆ.

ಕಜಕಿಸ್ತಾನದ ತೀವ್ರ ಪ್ರತಿರೋಧದ ನಡುವೆಯೂ ಅಂತಿಮವಾಗಿ ಮೇಲುಗೈ ಸಾಧಿಸುವ ಮೂಲಕ ಕತ್ರಿನಾ ಸಿನಿಕೋವಾ ಬಾರ್ಬೊರಾ ಕ್ರೆಜ್ಕೋವಾ ಪ್ರಶಸ್ತಿ ಗೆದ್ದುಕೊಂಡರು. ಈ ಜೋಡಿ 2016 ರಲ್ಲಿ ಜೊತೆಯಾಗಿ ನಂತರ 2018 ವಿಂಬಲ್ಡನ್ ಗೆದ್ದರು, 2021 ರಲ್ಲಿ ಫ್ರೆಂಚ್ ಓಪನ್ ತಮ್ಮದಾಗಿಸಿಕೊಂಡಿದ್ದಾರೆ. ಭಾನುವಾರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ನಾಲ್ಕನೇ ಗ್ರ್ಯಾನ್ ಸ್ಲಾಮ್ ತಮ್ಮ ಕಾತೆಗೆ ಸೇರಿಸಿಕೊಂಡಿದ್ದಾರೆ.

No Comments

Leave A Comment