Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ನಿವಾಸದಿಂದ ಕಾಲ್ಕಿತ್ತ ಜಸ್ಟಿನ್ ಟ್ರುಡೊ: ಕೆನಡಾ ಪ್ರಧಾನಿ ನಿವಾಸ ಸುತ್ತುವರಿದ 20 ಸಾವಿರ ಟ್ರಕ್‌ಗಳು!

ಒಟ್ಟಾವಾ: ಕೆನಡಾ ಹೋರಾಟಗರ ಕಿಚ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಕುಟುಂಬ ಸಮೇತ ಮನೆ ತೊರೆದಿದ್ದಾರೆ. ಪ್ರತಿಭಟನೆ ಉಗ್ರರೂಪ ತಾಳಿರುವ ಬಳಿಕ ಜಸ್ಟಿನ್ ಟ್ರುಡೊ ರಹಸ್ಯ ಸ್ಥಳಕ್ಕೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟ್ರೂಡೊ ಸರ್ಕಾರವು ಅಮೆರಿಕ ಗಡಿಯನ್ನು ದಾಟಲು ಟ್ರಕ್ ಡ್ರೈವರ್‌ಗಳು ಕೊರೋನಾ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರುವ ಚಾಲಕರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾನಿರತರು, ಪ್ರಧಾನಿ ಟ್ರುಡೊ ಅವರನ್ನು ಕಟುವಾಗಿ ಟೀಕಿಸಿದರು. ಲಸಿಕೆಯನ್ನು ಕಡ್ಡಾಯಗೊಳಿಸುವುದು ಆರೋಗ್ಯಕ್ಕೆ ಸಂಬಂಧಿಸಿಲ್ಲ, ಆದರೆ ಎಲ್ಲ ವಿಷಯಗಳನ್ನು ನಿಯಂತ್ರಿಸುವುದು ಸರ್ಕಾರದ ತಂತ್ರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ರಾಜಧಾನಿ ಒಟ್ಟಾವಾದಲ್ಲಿರುವ ಪ್ರಧಾನಿ ನಿವಾಸವನ್ನು ಶನಿವಾರ 20 ಸಾವಿರ ಟ್ರಕ್ ಚಾಲಕರು ಸುತ್ತುವರಿದಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಟ್ರುಡೋ ರಾಜಧಾನಿ ಒಟ್ಟಾವಾ ಅನ್ನು ತೊರೆದಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿವೆ.

ಹೆಚ್ಚುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರದ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸರು ಹೊರಡಿಸಿದ ಅಧಿಕೃತ ಹೇಳಿಕೆಯಲ್ಲಿ, ಶನಿವಾರ ಸುಮಾರು 10,000 ಜನರು ಸಂಸತ್ತಿನ ಬಳಿ ಜಮಾಯಿಸಿದ್ದರು ಎಂದು ಹೇಳಿದ್ದಾರೆ. ಸದ್ಯ ಸಂಸತ್ತಿನ ಆವರಣದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ಅಂಕಿಅಂಶಗಳ ಬಗ್ಗೆ ಪೊಲೀಸರ ಬಳಿಯೂ ಮಾಹಿತಿ ಇಲ್ಲ.

ಈ ಹಿಂದೆಯೂ ಪ್ರಧಾನಿ ಜಸ್ಟಿನ್ ಟ್ರುಡೋ ಟ್ರಕ್ ಡ್ರೈವರ್ ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದರಲ್ಲಿ ಟ್ರಕ್ ಚಾಲಕರನ್ನು ‘ಯಾವುದೇ ಪ್ರಾಮುಖ್ಯತೆಯಿಲ್ಲದ ಅಲ್ಪಸಂಖ್ಯಾತರು’ ಎಂದು ಕರೆದಿದ್ದರು. ಇದರಿಂದ ಲಾರಿ ಸವಾರರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

No Comments

Leave A Comment