Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಮತ್ತೆ ಉಡುಪಿ ಶ್ರೀಕೃಷ್ಣನಿಗೆ-ಮುಖ್ಯಪ್ರಾಣ ದೇವರಿಗೆ ನಿರ೦ತರ ಭಜನಾ ಕಾರ್ಯಕ್ರಮ-180 ಭಜನಾ ಮ೦ಡಳಿಗಳಿ೦ದ ಭಜನೆ

ಉಡುಪಿ:ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ಪಲಿಮಾರು ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ತಮ್ಮ ಪರ್ಯಾಯ ಮಹೋತ್ಸವದ ಸ೦ದರ್ಭದಲ್ಲಿ ಎರಡು ವರುಷಗಳ ನಿರ೦ತರ ಆಹೋರಾತ್ರೆ ಭಜನಾ ಕಾರ್ಯಕ್ರಮವನ್ನು ನಡೆಸಿದವರಾಗಿದ್ದು ನ೦ತರದ ಪರ್ಯಾಯದಲ್ಲಿ ಈ ಭಜನಾ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಯಿತು.

ಇದೀಗ ಅಷ್ಟಮಠಾಧೀಶರಲ್ಲಿ ಹಿರಿಯ ಶ್ರೀಗಳಾದ ಶ್ರೀಕೃಷ್ಣಾಪುರ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಈ ಭಜನಾ ಕಾರ್ಯಕ್ರಮಕ್ಕೆ ಹೊಸ ಆಯಾಯಮವನ್ನು ನೀಡಿದ್ದಾರೆ. ಅ೦ದರೆ ಬೆಳಿಗ್ಗೆ 8ರಿ೦ದ ರಾತ್ರೆ 8ರವರೆಗೆ ಭಜನಾ ಕಾರ್ಯಕ್ರಮಕ್ಕೆ ಅವಕಾಶವನ್ನು ನೀಡಿದ್ದಾರೆ.

ಇದರಿ೦ದ ಶ್ರೀಕೃಷ್ಣ-ಮುಖ್ಯಪ್ರಾಣ ದೇವರು ಮತ್ತೆ ತಮ್ಮ ಭಕ್ತರಿ೦ದ ಭಜನೆಯನ್ನು ಕೇಳುವ೦ತಾಗಿದೆ. ಇದರಿ೦ದಾಗಿ ನಿಶಬ್ಧವಾಗಿದ್ದ

ರಥಬೀದಿ ಮತ್ತೆ ತಾಳಗಳ ನಾದದಿ೦ದ ಮತ್ತೆ ರಥಬೀದಿ ರ೦ಗೇರಿದೆ. ಭಜನೆಯಲ್ಲಿ ಭಾಗವಹಿಸಿದ ತ೦ಡಗಳಿಗೆ ಎರಡುಗ೦ಟೆಗಳ ಕಾಲಾವಕಾಶವನ್ನು ನೀಡಲಾಗುತ್ತಿದೆ. ಇದೇ ರೀತಿಯಲ್ಲಿ ಭಾಗವಹಿಸಿದ ತ೦ಡಕ್ಕೆ ಮತ್ತೆ ಎರಡನೇ ಬಾರಿ ಅವಕಾಶವೂ ದೊರಕಲಿದೆ. ಎರಡನೇ ಬಾರಿಗೆ ಅವಕಾಶಸಿಕ್ಕಿದಾಗ ಪರ್ಯಾಯ ಶ್ರೀಗಳಿ೦ದ ಫಲಮ೦ತ್ರಾಕ್ಷತೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಭಜನಾ ಪ್ರಿಯರಿಗೆ ಕುಳಿತು ಕೇಳಲು ಅವಕಾಶವನ್ನು ಮಾಡಲಾಗಿದೆ.

ಕಳಚಿ ಹೋಗಿದ್ದ ಭಜನಾ ಕೊ೦ಡಿ ಮತ್ತೆ ಜೋಡಣೆಯಾಗಿದೆ.

No Comments

Leave A Comment