Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಕಾಪು: ಹೆಜಮಾಡಿ ಟೋಲ್ ಗೇಟ್ ಬಳಿ ಬೆಂಕಿಗಾಹುತಿಯಾದ ಲಾರಿ

ಕಾಪು: ಎಂಸಿಎಫ್‌ನಿಂದ ಭದ್ರಾವತಿಗೆ ತೆರಳುತ್ತಿದ್ದ ಈಚರ್ ಲಾರಿಯೊಂದು ಹೆಜಮಾಡಿಯಲ್ಲಿ ಬುಧವಾರ ತಡರಾತ್ರಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ ಗೇಟ್ ಬಳಿ ಟ್ರಕ್ ಸಿಬ್ಬಂದಿ ವಾಹನವನ್ನು ನಿಲ್ಲಿಸಿ ಅಡುಗೆ ತಯಾರಿ ಮಾಡುತ್ತಿರುವ ವೇಳೆ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಇನ್ನು ಚಾಲಕ ನವೀದ್ ಪಾಶಾ ಟ್ರಕ್‌ನಿಂದ ಹಾರಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಸ್ಥಳೀಯರು ಮತ್ತು ಟೋಲ್ ಗೇಟ್ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

No Comments

Leave A Comment