Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಭಟ್ಕಳದಲ್ಲಿ ಶ್ರೀ ದಂಡಿನದುರ್ಗಾ ದೇವಸ್ಥಾನಕ್ಕೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಕೋಟೇಶ್ವರ ನಗರದಲ್ಲಿರುವ ಶ್ರೀ ದಂಡಿನದುರ್ಗಾ ದೇವಸ್ಥಾನಕ್ಕೆ ಕಳೆದ ಕೆಲವು ದಿನಗಳಿಂದ ಕಲ್ಲನ್ನು ಎಸೆಯಲಾಗುತ್ತಿದ್ದು ಮಂಗಳವಾರ ಇದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರ ಗಮನಕ್ಕೆ ಬಂದಿದ್ದು ನಗರ ಠಾಣೆಗೆ ಈ ಕುರಿತು ದೂರು ದಾಖಲಾಗಿದೆ.

ಪಟ್ಟಣದ ಕೋಟೇಶ್ವರ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಜ22ರಿಂದ ಜ24ರವರೆಗೆ ವರ್ಧಂತಿ ಉತ್ಸವ ನಡೆಯುತಿತ್ತು. ಜ.22ರಂದು ದೇವಸ್ಥಾನದ ಪ್ರಾಂಗಣದಲ್ಲಿ ಶಾಮಿಯಾನ ಹಾಕಲಾಗಿತ್ತು.

22ರಂದು ದೇವಸ್ಥಾನಕ್ಕೆ ದುಷ್ಕರ್ಮಿಗಳು ಕಲ್ಲು ಎಸೆಯಲು ಆರಂಭಿಸಿದ್ದರು. ಮೊದಲ ದಿನ ಆಡಳಿತ ಮಂಡಳಿಯ ಸದಸ್ಯರು ಅದನ್ನು ಗಂಭಿರವಾಗಿ ಪರಿಗಣಿಸಿಲ್ಲ. ನಂತರ 25ರಂದು ಪೂಜಾ ಸಮಯದಲ್ಲಿ ಮತ್ತೆ ಕಲ್ಲು ತೂರಾಟ ಆರಂಭವಾಗಿದೆ. ಪೂಜಾ ಕಂಕೈರ್ಯದಲ್ಲಿ ತೊಡಕು ಬರಬಾರದು ಎನ್ನುವ ಹಿನ್ನಲೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು ಅದನ್ನು ಅಲ್ಲಿಗೆ ಬಿಟ್ಟಿದ್ದರು. ೨೪ ಮತ್ತು 25ರಂದು ಅದೆ ಘಟನೆ ಪುನರಾವರ್ತನೆ ಆಗಿದೆ. 25ರಂದು ದುಷ್ಕರ್ಮಿಗಳು ಎಸೆದ ಕಲ್ಲು ಆಡಳಿತ ಮಂಡಳಿ ಅಧ್ಯಕ್ಷ ಮೋಹನ ಶಿರಾಲಿಕರ ಕಾಲಿಗೆ ತಗುಲಿದೆ. ದೇವಸ್ಥಾನದ ಸುತ್ತಲೂ ಇನ್ನೊಂದು ಕೋಮಿನವರ ಮನೆಗಳೇ ಹೆಚ್ಚಿದ್ದು ಆತಂಕ ಹೆಚ್ಚುವಂತೆ ಮಾಡಿದೆ.

ಈ ಕುರಿತು ನಗರಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಒರ್ವ ಪೊಲೀಸರನ್ನು ಸ್ಥಳಕ್ಕೆ ನೀಯೋಜನೆಗೊಳಿಸಲಗಿದೆ.

No Comments

Leave A Comment