
ಬ್ಯಾಂಕ್ ಸರ್ವರ್ ಹ್ಯಾಕ್; 128 ಖಾತೆಗಳಿಗೆ 12 ಕೋಟಿ ರೂ.ಗಳನ್ನು ವರ್ಗಾಯಿಸಿಕೊಂಡ ವಂಚಕರು
ಹೈದ್ರಾಬಾದ್ನ ಮಹೇಶ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ ( Mahesh Co-Operative Urban Bank ) ಅನ್ನು ಸೈಬರ್ ವಂಚಕರು ಹ್ಯಾಕ್ (Hack) ಮಾಡಿದ್ದು 12.90 ಕೋಟಿ ರೂಗಳನ್ನು ದೇಶದ ವಿವಿಧ ಬ್ಯಾಂಕ್ಗಳ 128 ಖಾತೆಗಳಿಗೆ ವರ್ಗಾಯಿಸಿದ ಘಟನೆ ನಡೆದಿದೆ. ಒಂದೇ ಬ್ಯಾಂಕ್ನ ಮೂರು ಖಾತೆಗಳನ್ನು ಹ್ಯಾಕ್ ಮಾಡಿದ್ದು ಒಂದೇ ದಿನದಲ್ಲಿ 12 ಕೋಟಿಗೂ ಹೆಚ್ಚು ಹಣಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಮಹೇಶ್ ಕೋ ಆಪರೇಟಿವ್ ಅರ್ಬನ್ ಬ್ಯಾಂಕ್ನ ಐಟಿ ಹೆಡ್ ಕೆ ಬದ್ರಿನಾಥ್ ಮಾಹಿತಿ ನೀಡಿದ್ದು, ಬ್ಯಾಂಕ್ ಗ್ರಾಹಕರ ಖಾತೆಗಳಲ್ಲಿನ ಹಣ ಸುರಕ್ಷಿತವಾಗಿದೆ. ಹ್ಯಾಕರ್ಸ್ಗಳು ಬ್ಯಾಂಕ್ನ ರೆಮಿಟನ್ಸ್ ಫಂಡ್ (Remittance Funds) (ರವಾನೆ ಮಾಡುವ ಹಣ)ನ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಗಮನಕ್ಕೆ ಬಂದ ತಕ್ಷಣ ಹಣ ವರ್ಗಾವಣೆಯಾಗುವುದನ್ನು ತಡೆಯಲಾಗಿದೆ. ಆದರೂ 12.90 ಕೋಟಿರೂಗಳನ್ನು ವಂಚಕರು ದೋಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.