Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಸ್ಮಾರಕದ ಮೂಲಕ ಪ್ರತೀಯೊಬ್ಬ ಭಾರತೀಯನೂ ದೇಶಕ್ಕಾಗಿ ನೇತಾಜಿ ನೀಡಿರುವ ಕೊಡುಗೆ ಬಗ್ಗೆ ಹೆಮ್ಮೆ ಪಡುತ್ತಾನೆ: ಪ್ರಧಾನಿ ಮೋದಿ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸ್ಮಾರಕದ ಮೂಲಕ ಪ್ರತೀಯೊಬ್ಬ ಭಾರತೀಯನೂ ದೇಶಕ್ಕೆ ನೇತಾಜಿಯವರು ನೀಡಿರುವ ಕೊಡುಗೆ ಬಗ್ಗೆ ಹೆಮ್ಮೆ ಪಡುತ್ತಾನೆಂದು ಭಾನುವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದೇಶದ ಎಲ್ಲಾ ಜನತೆಗೆ ಪರಾಕ್ರಮ್ ದಿನ ಹಬ್ಬದ ಶುಭಾಶಯಗಳು. ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದಂದು ಗೌರವಾನ್ವಿತ ನಮನಗಳನ್ನು ಸಲ್ಲಿಸುತ್ತಿದ್ದೇನೆ. ಅವರ ಜಯಂತಿಯಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ನಮಸ್ಕರಿಸುತ್ತೇನೆ. ಸ್ಮಾರಕದ ಮೂಲಕ ಪ್ರತೀಯೊಬ್ಬ ಭಾರತೀಯನೂ ದೇಶಕ್ಕಾಗಿ ನೇತಾಜಿ ನೀಡಿರುವ ಕೊಡುಗು ಕುರಿತು ಹೆಮ್ಮೆಪಡುತ್ತಾನೆಂದು ಹೇಳಿದ್ದಾರೆ.

ಈ ನಡುವೆ ಸಂಸತ್ತಿನ ಸೆಂಟ್ರಲ್ ಹಾಲ್‌’ಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು, ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ದೇಶವು ಅವರಿಗೆ ಗೌರವವನ್ನು ಸಲ್ಲಿಸುತ್ತಿದೆ. ಆಜಾದ್ ಹಿಂದ್ – ಮುಕ್ತ ಭಾರತದ ಕಲ್ಪನೆಗೆ ಬದ್ಧತೆಯನ್ನು ಪ್ರದರ್ಶಿಸಲು ಅವರು ತೆಗೆದುಕೊಂಡ ದಿಟ್ಟ ಹೆಜ್ಜೆಗಳು ಅವರು ರಾಷ್ಟ್ರೀಯ ಪ್ರಮುಖ ವ್ಯಕ್ತಿಯಾಗುವಂತೆ ಮಾಡಿತು. ಅವರ ಆದರ್ಶಗಳು ಮತ್ತು ತ್ಯಾಗಗಳು ಪ್ರತಿಯೊಬ್ಬ ಭಾರತೀಯರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತವೆ ಎಂದು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ಸ್ವಾತಂತ್ರ್ಯದ ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮಸ್ಕರಿಸುತ್ತೇನೆ. ಅವರು ತಮ್ಮ ಅಸಾಧಾರಣ ದೇಶಭಕ್ತಿ, ಅದಮ್ಯ ಧೈರ್ಯ ಮತ್ತು ಅದ್ಭುತ ಭಾಷಣದಿಂದ ಯುವಕರನ್ನು ಸಂಘಟಿಸುವ ಮೂಲಕ ವಿದೇಶಿ ಆಡಳಿತದ ಬುನಾದಿಯನ್ನು ಅಲ್ಲಾಡಿಸಿದ್ದರು. ಅವರ ಅಪ್ರತಿಮ ತ್ಯಾಗ, ದೃಢತೆ ಮತ್ತು ಮಾತೃಭೂಮಿಗಾಗಿ ಹೋರಾಟ ಯಾವಾಗಲೂ ದೇಶಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದ್ದಾರೆ.

ಭಾರತದ ಸ್ವಾತಂತ್ರ್ಯಕ್ಕೆ ನೇತಾಜಿಯವರ ಅನುಪಮ ಕೊಡುಗೆಯನ್ನು ದೇಶಾದ್ಯಂತ ‘ಪರಾಕ್ರಮ್ ದಿವಸ್’ ಎಂದು ಆಚರಿಸುವ ವಿನೂತನ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಿದ್ದು, ಈ ಮೂಲಕ ನೇತಾಜಿಯವರ ಜನ್ಮದಿನವನ್ನು ಸ್ಮರಣೀಯಗೊಳಿಸಿದ್ದಾರೆ. ಇದು ಮುಂದಿನ ಪೀಳಿಗೆಗಳಲ್ಲಿ ನೇತಾಜಿಯವರ ಕ್ರಿಯಾತ್ಮಕ ಚಿಂತನೆಗಳು ಮತ್ತು ಆಲೋಚನೆಗಳನ್ನು ಸಕಾರಗೊಳಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ, ಸರ್ವರಿಗೂ ಪರಾಕ್ರಮ ದಿನದ ಹಾರ್ದಿಕ ಶುಭಾಶಯಗಳು. ವೀರ ಪರಾಕ್ರಮಿ, ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯಂದು ಅವರಿಗೆ ಭಕ್ತಿ ಪೂರ್ವಕ ನಮನಗಳು. ಅವರ ದೇಶಪ್ರೇಮ, ಸಾಹಸಮಯ ಹೋರಾಟ ಇಂದಿಗೂ ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ಪೂರ್ತಿ ಎಂದಿದ್ದಾರೆ.

ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಯವರು, ಇಡೀ ರಾಷ್ಟ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ಗ್ರಾನೈಟ್‌ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಲು ನನಗೆ ಸಂತೋಷವಾಗಿದೆ. “ಇದು ಅವರಿಗೆ ಭಾರತದ ಋಣಭಾರದ ಸಂಕೇತವಾಗಿದೆ. ಪ್ರತಿಮೆ ಪ್ರತಿಷ್ಠಾಪನೆ ಪೂರ್ಣಗೊಳ್ಳುವವರೆಗೆ ನೇತಾಜಿಯವರ ಹೊಲೊಗ್ರಾಮ್ ಅನ್ನು ಪ್ರತಿಮೆಯ ಸ್ಥಳದಲ್ಲಿ ಪ್ರದರ್ಶಿಸಲಾಗುವುದು. ನೇತಾಜಿ ಅವರ ಜನ್ಮದಿನವಾದ ಜನವರಿ 23 ರಂದು ನಾನು ಹೊಲೊಗ್ರಾಮ್ ಪ್ರತಿಮೆಯನ್ನು ಅನಾವರಣಗೊಳಿಸುತ್ತೇನೆ ಎಂದು ಹೇಳಿದ್ದರು.

1987ರಲ್ಲಿ ಇದೇ ದಿನ ಜನಿಸಿದ್ದ ಬೋಸ್ ಅವರ ಗೌರವಾರ್ಥವಾಗಿ ಜನವರಿ 23 ಅನ್ನು ಪರಾಕ್ರಮ ದಿನವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

1897ರ ಜನವರಿ 23ರಂದು ಒಡಿಶಾದ ಕಟಕ್‌ ನಗರದಲ್ಲಿ ಜಾನಕಿನಾಥ್‌ ಬೋಸ್‌ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿದ ನೇತಾಜಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಟಕ್‌ ನಗರದಲ್ಲಿ ಮುಗಿಸಿ, 1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದು, ನಂತರ ಅದೇ ವರ್ಷ ಸೆಪ್ಟೆಂಬರ್‌ 15ರಂದು ಐಸಿಎಸ್‌ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಾಣ ಬೆಳೆಸಿದರು. ಅತಿ ಕಷ್ಟದ ಪರೀಕ್ಷೆಯಲ್ಲಿ 4ನೇ ಕ್ರಮಾಂಕದಲ್ಲಿ ತೇರ್ಗಡೆಯೂ ಆದರು. ಆದರೆ ವಿದೇಶಿ ಗುಲಾಮಗಿರಿ ಅಡಿಯಲ್ಲಿ ಕೆಲಸ ಮಾಡಲು ಒಪ್ಪದ ಬೋಸ್‌ ಐಸಿಎಸ್‌ ಪದವಿ ಧಿಕ್ಕರಿಸಿ 1921ರಲ್ಲಿ ಸ್ವದೇಶಕ್ಕೆ ಮರಳಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.

No Comments

Leave A Comment