Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ನಮ್ಮ ಒಗ್ಗಟ್ಟನ್ನು ಹಾಳು ಮಾಡದಿರಿ: ರಾಜಕೀಯ ನಾಯಕರಿಗೆ ಜಯಮೃತ್ಯುಂಜಯ‌ ಶ್ರೀ ಎಚ್ಚರಿಕೆ

ಬೆಂಗಳೂರು: ಪ್ರತಿ ಗ್ರಾಮ, ಪಟ್ಟಣದಲ್ಲಿ ಪೀಠ ಕಟ್ಟುವುದು ತಪ್ಪಲ್ಲ. ಸಮುದಾಯದ ಐಕ್ಯತೆಯನ್ನು ಹಾಳುಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಡಿ ಎಂದು ರಾಜಕೀಯ ನಾಯಕರಿಗೆ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಒಗ್ಗೂಡಿಸಲು ಪೀಠ ಕಟ್ಟಲಾಗಿದೆ. ಪೀಠಗಳು ಸ್ಥಾಪನೆಯಾದ ನಂತರ ವೈಯುಕ್ತಿಕಕ್ಕೆ ಬಳಕೆ. ಸಚಿವರನ್ನು, ಸಿಎಂ ಮಾಡೋಕೆ ಬಳಕೆ ಆಗ್ತಿದೆ ಎಂಬ ತಪ್ಪು ಕಲ್ಪನೆ ಬಂದಿದೆ. ನಮ್ಮ ಮೂಲ ಉದ್ದೇಶ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವುದೇ ಆಗಿದೆ. ಸಿಎಂ, ಮಂತ್ರಿ ಸ್ಥಾನಕ್ಕಿಂತ ಸಮುದಾಯದ ಹಿತ ಮುಖ್ಯ, ಅದಕ್ಕಾಗಿ 712 ಕಿ.ಮೀ ದೊಡ್ಡ ಪಾದಯಾತ್ರೆ ಮಾಡಿದ್ದೆವು. ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದೆವು. ಸಮುದಾಯದ ಬೇರೆ ಬೇರೆಯವರ ಒಗ್ಗೂಡಿಕೆ ಪ್ರಯತ್ನ ಮಾಡಿದೆವು. ಮೈಸೂರಿನಿಂದ ನಾವು ಮತ್ತೆ ಹೋರಾಟ ನಡೆಸಿದೆವು ಎಂದು ಹೇಳಿದರು.

ಇತ್ತೀಚೆಗೆ ಮೂರನೇ ಪೀಠ ಸ್ಥಾಪನೆ ಬಗ್ಗೆ ಸುದ್ದಿ ಕೇಳಿಬರ್ತಿದೆ. ಗ್ರಾಮಕ್ಕೊಂದು, ಮನೆಗೊಂದು ಪೀಠ ಮಾಡಲಿ. ಮುರುಗೇಶ ನಿರಾಣಿಯವರು ಮೂರನೇ ಪೀಠಕ್ಕೆ ಬೆಂಬಲ ಇದೆ ಅಂದಿದ್ದಾರೆ. ಅವರು ತಮ್ಮ ಬೆಂಬಲ ಇದೆ ಎಂದಿದ್ದು ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು ಬಹಳ ಕಷ್ಟ ಪಟ್ಟು ಸಮುದಾಯ ಕಟ್ಟುತ್ತಿದ್ದೇವೆ. ಸಮಾಜ ಒಡೆಯುವ ಕೆಲಸ ಯಾರು ಮಾಡ್ತಿದ್ದಾರೆ ಯಾರು ಸಮಾಜ ಕಟ್ತಿದ್ದಾರೆ ಎಂಬುದು‌ ಎಲ್ಲರಿಗೂ ಗೊತ್ತಿದೆ.  ನೀವು ಎಂಎಲ್‌ಎ ಆಗಬೇಕ ಅಲ್ಲಿ ಪೀಠ ಮಾಡಿಕೊಳ್ಳಿ. ಸಿಎಂ ಆಗ್ಬೇಕಾ ರಾಜ್ಯದಲ್ಲಿ ಪೀಠ ಮಾಡಿಕೊಳ್ಳಿ. ನಿರಾಣಿಯವರು ಎಲ್ಲಿ ಬೇಕಾದರೂ ಮಾಡಿಕೊಳ್ಳಲಿ, ನಮ್ಮದೇನು ಇದಕ್ಕೆ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಅನೇಕ ಶಾಸಕರು ನಮ್ಮ‌ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಮೀಸಲಾತಿ ಹೋರಾಟದಿಂದ ಹೆಸರು ಬರುತ್ತದೆ. ಶ್ರೀಗಳು, ಯತ್ನಾಳ್, ಕಾಶಪ್ಪಗೆ ಬರುತ್ತೆ ಅಂದುಕೊಂಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ. ಪರೋಕ್ಷವಾಗಿ ನಿರಾಣಿ ವಿರುದ್ಧ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕುಗ್ಗಿಸುವ ಕೆಲಸ ಮಾಡಬೇಡಿ.‌ ಸಮಾಜ ಕಟ್ಟುವ ಕೆಲಸ ನಾವು‌ ಮಾಡ್ತೇವೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ. ಸರ್ಕಾರದ ಅನುದಾನವನ್ನು ವಾಪಸ್ ಕೊಟ್ಟಿದ್ದೇವೆ. ನಮಗೆ ಮೀಸಲಾತಿ ಮುಖ್ಯ ಎಂದು ಹೊರಟಿದ್ದೇವೆ ಎಂದ ಅವರು, ನಿಮ್ಮ‌ಸ್ವಾರ್ಥಕ್ಕೆ ಮಠ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು‌ ಖಾರವಾಗಿ ನುಡಿದರು.

ಸಮಾಜ ಯಾರು ಒಡೆಯುತ್ತಿದ್ದಾರೆ. ಯಾರು ಸಮಾಜ ಕಡ್ತಾರೆ ನೀವೇ ಗಮನಿಸಿ. ನಮ್ಮ‌ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ.‌ ಅವರು ಎಷ್ಟು ಪೀಠ ಬೇಕಾದ್ರೂ ಮಾಡಿಕೊಳ್ಳಲಿ ಆದರೆ ನಮ್ಮ‌ ಪೀಠವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು‌ ಆಕ್ರೋಶದಿಂದ‌ ನುಡಿದರು.

No Comments

Leave A Comment