Log In
BREAKING NEWS >
ಜೂನ್ 1 ರಿಂದ 9ರವರೆಗೆ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ…

ಕಾರು ಹಾಗೂ ಬೈಕ್ ಡಿಕ್ಕಿ:ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ನಿಧನ

ಮೂಡುಬಿದಿರೆ: ಓಮ್ನಿ ಕಾರು ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಖ್ಯಾತ ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ (47) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆಯಲ್ಲಿ ಇಂದು ಮುಂಜಾನೆ ಸಂಭವಿಸಿದೆ‌.

ಹಿರಿಯಡ್ಕ ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮೇಳದ ಕಲಾವಿದರಾಗಿ ದುಡಿಯುತ್ತಿದ್ದ ವಾಮನ ಕುಮಾರ್, ನಿನ್ನೆ ರಾತ್ರಿ ಕುಂದಾಪುರದ ಕೊಂಕಿ ಎಂಬಲ್ಲಿ ಯಕ್ಷಗಾನವನ್ನು ಮುಗಿಸಿ ಅವರು ಬರುತ್ತಿದ್ದ ಬೈಕು ಹಾಗೂ ಎದುರಿನಿಂದ ಬರುತ್ತಿದ್ದ ಓಮ್ನಿ ವ್ಯಾನ್ ಪರಸ್ಪರ ಡಿಕ್ಕಿಯಾಗಿದ್ದು, ವಾಮನಕುಮಾರ್ ದುರಂತ ಸಾವಿಗೀಡಾಗಿದ್ದಾರೆ.

ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧಿ ಪಡೆದಿರುವ ವಾಮನ ಕುಮಾರ್, ಇತ್ತೀಚಿನ ವರ್ಷಗಳಲ್ಲಿ ಪುರುಷ ವೇಷವನ್ನೂ ಮಾಡುತ್ತಿದ್ದರು‌.‌ ಧರ್ಮಸ್ಥಳ ಕೇಂದ್ರದಲ್ಲಿ ಯಕ್ಷನಾಟ್ಯವನ್ನು ಅಭ್ಯಾಸ ಮಾಡಿದ ವಾಮನ್, ಮೊದಲಿಗೆ ಧರ್ಮಸ್ಥಳ ಮೇಳದಲ್ಲಿಯೇ ತಮ್ಮ ಯಕ್ಷ ಪಯಣ ಆರಂಭಿಸಿದ್ದರು‌.

ಆ ಬಳಿಕ ಕದ್ರಿ ಮೇಳ, ಮಂಗಳಾದೇವಿ ಮೇಳ ಇದೀಗ ಹಿರಿಯಡ್ಕ ಮೇಳದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು. ಯಕ್ಷಗಾನದಲ್ಲಿ 30 ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ.

ಪ್ರಮೀಳೆ, ಭ್ರಮರ ಕುಂತಳೆ, ಮಾಲಿನಿ, ಪ್ರಭಾವತಿ, ಪದ್ಮಾವತಿ, ಕಿನ್ನಿದಾರು, ದುರ್ಮುಖಿ ಮುಂತಾದ ಸ್ತ್ರೀಪಾತ್ರಗಳಲ್ಲದೆ, ಕೃಷ್ಣ, ಕುಶ-ಲವ, ಚಂಡ-ಮುಂಡ, ಕೋಟಿ-ಚೆನ್ನಯ, ಕಾಂತಬಾರೆ-ಬುದಬಾರೆ, ಸುದರ್ಶನ, ಭಾರ್ಗವ ಮುಂತಾದ ಅಬ್ಬರದ ಪುಂಡುವೇಷಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಮಸ್ಕತ್ ಸಹಿತ ವಿವಿಧೆಡೆ ಇವರ ಕಲಾಪ್ರತಿಭೆಗೆ ಸನ್ಮಾನವೂ ಸಂದಿದೆ. ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧುಗಳನ್ನು, ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.

No Comments

Leave A Comment