Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಶ್ರೀ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ಪ್ರಮುಖ ಯೋಜನೆಗಳ ಕೇಂದ್ರ ಕಾರ್ಯಾಲಯ ಉದ್ಘಾಟನೆ

ಉಡುಪಿ: ಮು೦ಬರುವ 2024-25 ರಲ್ಲಿ ಉಡುಪಿಯ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಶ್ರೀ ಪುತ್ತಿಗೆ ಮಠದ ಚತುರ್ಥ ಪರ್ಯಾಯದ ನಿಮಿತ್ತವಾಗಿ ಸಂಕಲ್ಪಿಸಿರುವ ಪ್ರಮುಖ ಯೋಜನೆಗಳ ಕಾರ್ಯಾಲಯ “ಅಂತರ್ಯಾಮಿ” ಕೇಂದ್ರವನ್ನು ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಪರ್ಯಾಯದ ಪ್ರಮುಖ ಯೋಜನೆಯಾದ ಕೋಟಿಗೀತಾಲೇಖನ ಯಜ್ಞ ದ ಅಭಿಯಾನಕ್ಕೂ ಪೂಜ್ಯ ಶ್ರೀಪಾದರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ನಾಗರಾಜ ಆಚಾರ್ಯ, ಶ್ರೀ ಪ್ರಸನ್ನ ಆಚಾರ್ಯ, ಶ್ರೀರತೀಶ್ ತಂತ್ರಿ, ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ, ಪ್ರಮೋದಸಾಗರ್, ಆಸ್ಟ್ರೇಲಿಯಾದ ಪ್ರಸಿದ್ಧ ಯೋಗ ಗುರು ರಾಜೇಂದ್ರ ವೆಂಕನಮೂಲೆ, ಡಾ. ಸುಗುಣದಾಸ್. ಶ್ರೀ ಕೆ.ವಿ.ರಮಣ, ಸಂತೋಷ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

ವಿದ್ವಾನ್ ಬಿ.ಗೋಪಾಲಾಚಾರ್ ಸ್ವಾಗತಿಸಿ ನಿರೂಪಿಸಿದರು. ಎಂ ಪ್ರಸನ್ನ ಆಚಾರ್ಯ ಇವರು ವಂದನಾರ್ಪಣೆ ಮಾಡಿದರು.

No Comments

Leave A Comment