ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಉಡುಪಿ ಮೋಟರ್ಸ್‌ನ 5ನೇ ವಾರ್ಷಿಕೋತ್ಸವ….
ಉಡುಪಿ: ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಗುಂಡಿಬೈಲಿನಲ್ಲಿರುವ ಉಡುಪಿ ಮೋಟರ್ಸ್‌ನ ಐದನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.
ಬ್ಯಾಂಕ್ ಆಫ್ ಬರೊಡ ಉಡುಪಿ ಶಾಖೆಯ ಮ್ಯಾನೇಜರ್ ಚರಣ್‌ರಾಜ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ‘ಯಮಹಾ ಫ್ಯಾಸಿನೊ ಮೈಲೇಜ್ ಚಾಲೆಂಜ್’ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಲವಿನಾ ಡಿ’ಸಿಲ್ವಾ (150 ಕಿ.ಮೀ / ಲೀ.), ದ್ವಿತೀಯ ಬಹುಮಾನ ಪಡೆದ ಮೇಘಾ (116 ಕಿ.ಮೀ./ ಲೀ.) ಹಾಗೂ ತೃತೀಯ ಬಹುಮಾನ ಪಡೆದ ಸೀತಾರಾಮ್ ಭಟ್ (110 ಕಿ.ಮೀ./ ಲೀ.) ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿಯ ಉಡುಪಿ ಡಿವಿಜನಲ್ ಮ್ಯಾನೇಜರ್ ಪ್ರತಿಭಾ ಶೆಟ್ಟಿ ಹಾಗೂ ಐಡಿಎಫ್‌ಸಿ ಫಸ್ಟ್ ಬ್ಯಾಂಕಿನ ಏರಿಯಾ ಸೇಲ್ಸ್ ಮ್ಯಾನೇಜರ್ ವರುಣ್ ಅವರು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.
ನ್ಯಾಷನಲ್ ಇನ್ಶೂರೆನ್ಸ ಕಂಪೆನಿಯ ಅಸಿಸ್ಟೆಂಟ್ ಡಿವಿಜನಲ್ ಮ್ಯಾನೇಜರ್ ನರಸಿಂಹ ಪೈ, ಐಡಿಎಫ್‌ಸಿ ಫಸ್ಟ್ ಬ್ಯಾಂಕಿನ ಟೀಮ್ ಲೀಡರ್ ಸಿದ್ಧಾರ್ಥ್, ಶಾಂತಲ್ ಪಬ್ಲಿಸಿಟಿಯ ಮಾಲಕ ಅಲೆವೂರು ದಿನೇಶ್ ಕಿಣಿ, ಗಣೇಶ್ ಮೋಟರ್ ಡ್ರೈವಿಂಗ್ ಸ್ಕೂಲ್‌ನ ಮಾಲಕ ಗಣೇಶ್ ರಾವ್, ಕರಾವಳಿ ಕಿರಣ ಡಾಟ್ ಕಾ೦ ಮಾಲಿಕರಾದ ಟಿ. ಜಯಪ್ರಕಾಶ್ ಕಿಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ ಹಲವರನ್ನು ಈ ಸಂದರ್ಭ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಡುಪಿ ಮೋಟರ್ಸ್‌ನ ಪಾಲುದಾರರಾದ ಟೈಟಸ್ ಸುವಾರಿಸ್ ಸ್ವಾಗತಿಸಿ, ಸಂಸ್ಥೆ ಗ್ರಾಹಕರ ಸೇವೆಯ ಮೂಲಕ ಯಶಸ್ಸಿನ ಹಾದಿ ಹಿಡಿದಿರುವುದಾಗಿ ತಿಳಿಸಿದರು. ಇನ್ನೋರ್ವ ಪಾಲುದಾರ ಜಯಪ್ರಕಾಶ್ ಭಂಡಾರಿ ವಂದಿಸಿ, ಉಡುಪಿ ಮೋಟರ್ಸ್‌ನ ಎಚ್.ಆರ್. ಮ್ಯಾನೇಜರ್ ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.