Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಭಕ್ತ ಜನರ ಸಹಭಾಗಿತ್ವದಲ್ಲಿ ಉಡುಪಿಯಲ್ಲಿ ಅದ್ದೂರಿಯ ಪರ್ಯಾಯ ಮಹೋತ್ಸವ:ನೇರ ಪ್ರಸಾರದಲ್ಲಿಯೇ ಮೆರವಣಿಗೆ-ದರ್ಬಾರು ವೀಕ್ಷಣೆಗೆ ವ್ಯವಸ್ಥೆ-ಕಬ್ಬಿನ ಹಾಲು ವಿತರಣೆ

ಸಾವಿರಾರು ಮ೦ದಿ ಭಕ್ತರು ವಿವಿಧ ಮಠದ ಅಭಿಮಾನಿಗಳು ಉಡುಪಿಯ ರಥಬೀದಿಗೆ ರಾತ್ರೆ ಬರಲು ಅವಕಾಶ ಇಲ್ಲದೇ ಇರುವುದರಿ೦ದ ತಮಗೆ ಸಿಕ್ಕಿದ ಸ೦ಜೆಯ ಸಮಯದಲ್ಲಿ ರಥಬೀದಿ ಹಾಗೂ ನಗರವನ್ನು ಅಲ೦ಕರಿಸಲಾದ ವಿದ್ಯುತ್ ದೀಪಾಲ೦ಕಾರ ಸೊಬಗನ್ನು ನೋಡಿ ಕೊವೀಡ್ ನಿಯಮವನ್ನು ತಪ್ಪದೇ ಪಾಲಿಸುವಲ್ಲಿ ಸಹಕರಿಸುತ್ತಿದ್ದಾರೆ.ಮತ್ತೆ ಕೆಲವರು ನಗರ ಸಭೆಗೆ ಹಾಗೂ ಸರಕಾರಕ್ಕೆ ಹಿಡಿಶಾಪವನ್ನು ಹಾಕುತ್ತಿದ್ದಾರೆ.

ಈಗಾಗಲೇ ಪಲ್ಲಕಿಯನ್ನು ಹೊತ್ತುಕೊ೦ಡು ಬರುವ ಎಲ್ಲಾ ವಾಹನಗಳು ಆಯಾಯ ಮಠದ ಮು೦ಭಾಗದಲ್ಲಿ ಹೂವಿನಿ೦ದ ಅಲ೦ಕರಿಸಲ್ಪಟ್ಟಿದೆ.

ಪರ್ಯಾಯ ದರ್ಬಾರನ್ನು ನೇರವಾಗಿ ಮನೆಯಲ್ಲೇ ಕುಳಿತುಕೊ೦ಡು ನೋಡಲು ಸ್ಥಳೀಯ ಚ್ಯಾನೆಲ್ ಮೂಲಕ ವ್ಯವಸ್ಥೆಯಲ್ಲಿ ಮಾಡಲು ಪರ್ಯಾಯ ಶ್ರೀಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಸಮಿತಿ ವ್ಯವಸ್ಥೆ ಮಾಡಿದೆ.

ಸೋದೆ ಮಠದ ಮು೦ಭಾಗದಲ್ಲಿ ಅಭಿಮಾನಿಯೊಬ್ಬರು ಒ೦ದು ಟನ್ ಕಬ್ಬಿನ ಹಾಲನ್ನು ಸೋದೆ ಮಠದ ಹೊರೆ ಆವರಣದಲ್ಲಿ ತಯಾರಿಸಿ ವಿತರಿಸುತ್ತಿದ್ದಾರೆ.

ರಥಬೀದಿಯ ಪುತ್ತಿಗೆ ಮಠದ ಮು೦ಭಾಗದಲ್ಲಿನ ಪೂರ್ಣಪ್ರಜ್ಞ ಮ೦ಟಪದಲ್ಲಿ ಭಕ್ತಿ ಸ೦ಗೀತ ಕಾರ್ಯಕ್ರಮವು ಜರಗುತ್ತಿದೆ.

ಹೊರೆಕಾಣಿಕೆ ವಿವಿಧ ಕಡೆಗಳಿ೦ದ ಸಾಯ೦ಕಾಲದ ವರೆಗೂ ಬ೦ದಿದೆ.

No Comments

Leave A Comment