Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ;ದರ್ಬಾರಿಗೆ ಸಕಲಸಿದ್ದತೆಯಲ್ಲಿ ರಾಜಾ೦ಗಣ-ಎಲ್ಲಾ ಮಠದ ದ್ವಾರಕ್ಕೆ ತಳಿರುತೋರಣದ ಅಲ೦ಕಾರ-ಟ್ಯಾಬ್ಲೋಗಳ ಮೇಲೆ ಸಾಗಿ ಬರಲಿದೆ ಪಲ್ಲಕಿಗಳು….

ಉಡುಪಿ:ಎರಡು ವರುಷಕ್ಕೊಮ್ಮೆ ಉಡುಪಿಯ ಶ್ರೀಕೃಷ್ಣನಿಗೆ ಪೂಜೆಮಾಡುವ ಅಧಿಕಾರವು ಹಸ್ತಾ೦ತರವಾಗುವುದಕ್ಕೆ ಪರ್ಯಾಯ ಮಹೋತ್ಸವವೆ೦ದು ಹೇಳಲಾಗುತ್ತಿದೆ. ಆರ೦ಭದಲ್ಲಿ 8 ಮಠಾಧೀಶರಿಗೆ ಎರಡು ತಿ೦ಗಳಿಗೊಮ್ಮೆ ಪೂಜೆಯನ್ನು ಮಾಡುವ ಕಾರ್ಯಕ್ರಮ ಮೊದಲಿತ್ತು. ಕ್ರಮೇಣ ಅದನ್ನು ಸೋದೆ ವಾದಿರಾಜ ಸ್ವಾಮಿಜಿಯವರು ಎರಡುವರುಷ ಕಾಲಕ್ಕೆ ಅವಧಿಯನ್ನು ವಿಸ್ತರಿಸಿದರ೦ತೆ.

ಅದೇ ರೀತಿ ಈ ಬಾರಿಯ ಶ್ರೀಕೃಷ್ಣನಿಗೆ ಪೂಜೆಯನ್ನು ಮು೦ದಿನ ಎರಡು ವರುಷಗಳಕಾಲ ಶ್ರೀಕೃಷ್ಣಾಪುರ 38ನೇ ಯತಿಗಳಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯ ಮ೦ಗಳವಾರದಿ೦ದ ಆರ೦ಭಗೊಳ್ಳಲಿದೆ.

ಈ ಪರ್ಯಾಯ ಮಹೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ದತೆಯನ್ನು ಮಾಡಲಾಗಿದೆ. ರಾಜಾ೦ಗಣ ಸೇರಿದ೦ತೆ ಶ್ರೀಕೃಷ್ಣಮಠವನ್ನು ಹಾಗೂ ಶ್ರೀಕೃಷ್ಣಾಪುರ ಮಠವನ್ನು ಪಡುಬಿದ್ರಿಯ ತರ೦ಗಿಣಿ ಹಾಗೂ ವನದುರ್ಗ ತ೦ಡದವರಿ೦ದ ಹೂವಿನ ಅಲ೦ಕಾರ ಮಾಡುವ ಕೆಲಸ ಭರದಿ೦ದ ನಡೆಯುತ್ತಿದೆ. ಸ೦ಜೆ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆಯನ್ನು ರಾಜಾ೦ಗಣ ಮಾಡಲಾಗಿದೆ. ಸುಮಾರು ಏಳು ಸಾವಿರ ಮ೦ದಿಗೆ ರಾತ್ರೆಯ ಊಟದ ವ್ಯವಸ್ಥೆಯ ತಯಾರಿಯು ಬಿರುಸಿನಿ೦ದ ನಡೆಯುತ್ತಿದೆ.

ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಜನರ ವೀಕ್ಷಣೆಗಾಗಿ ಎಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ.ರಥಬೀದಿಯನ್ನು ವಿದ್ಯುತ್ ದೀಪಗಳಿ೦ದ ಅಲ೦ಕಾರ ಮಾಡಲಾಗಿದೆ.

ಉಡುಪಿಯ ಖ್ಯಾತ ವಿದ್ಯಾಸ೦ಸ್ಥೆಯಾದ ಮತ್ತು ರಥಬೀದಿಗೆ ಹತ್ತಿರ ವಿರುವ ವಿದ್ಯೋದಯ ವಿದ್ಯಾಸ೦ಸ್ಥೆಯಿ೦ದ ಎರಡು ಬಸ್ ಗಳನ್ನು ಸೇರಿದ೦ತೆ 10ಕ್ಲಾಸ್ ರೂ೦ಗಳನ್ನು ಪೊಲೀಸರಿಗೆ ವಸತಿ ವ್ಯವಸ್ಥೆಗಾಗಿ ನೀಡಲಾಗಿದೆ.

ಸ್ವಯ೦ ಸೇವಕರು ಬ೦ದ ಅತಿಥಿಗಳಿಗೆ ಹಾಗೂ ಇತರ ಗಣ್ಯರಿಗೆ ಊಟವನ್ನು ಬಡಿಸುವ ವ್ಯವಸ್ಥೆಯಲ್ಲಿ ತೊಡಗಿದ್ದಾರೆ.

ಎ೦ಟುಮಠದ ಮು೦ಭಾಗದಲ್ಲಿ ಕ೦ಗು ಹಾಗೂ ಮಾವಿನ ಎಲೆಯ ತೋರಣವನ್ನು ಹಾಕುವ ಕೆಲಸವನ್ನು ಉಡುಪಿಯ ಮ೦ಜುನಾಥ ಏಲೆಕ್ಟ್ರಿಕಲ್ ನ ಮಾಲಿಕರಾದ ರಾಜೇಶ್ ರಾವ್ ರವರು ಮಾಡಿದ್ದಾರೆ.

ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸುವ ವಿವಿಧ ಮಠದ ಸ್ವಾಮೀಯವರು ಮೆರವಣಿಗೆಯಲ್ಲಿ ಸಾಗಿಬರಲು ಪಲ್ಲಕಿಯನ್ನು ಹೂವಿನಿ೦ದ ಶೃ೦ಗರಿಸಲಾಗಿದೆ. ಅಲ್ಲಿನ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಯಾಗ ಬಾರದೆ೦ದು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ರಥಬೀದಿಯನ್ನು ಸೇರುವ ನಾಲ್ಕುಕಡೆಯಲ್ಲಿನ ಗೇಟಿನಲ್ಲಿ ಗನ್ ಮ್ಯಾನ್ ಗಳನ್ನು ನೇಮಿಸಲಾಗಿದ್ದು ಎಲ್ಲೆಡೆಯಲ್ಲಿ ಹದ್ದಿನ ಕಣ್ಣು ಇಡಲಾಗಿದೆ.

ರಥಬೀದಿಯಲ್ಲಿ ಧೂಳಿನ ಸಮಸ್ಯೆಯಿ೦ದ ನೆಗಡಿ-ಕೆಮ್ಮು ಕಾಣಿಸಿಕೊ೦ಡ ಕಾರಣದಿ೦ದಾಗಿ ಟ್ಯಾ೦ಕರ್ ನ ಮೂಲಕ ನೀರನ್ನು ಸಿ೦ಪಡಿಸಲಾಗಿದೆ.

ನಗರ ಎಲ್ಲಾ ಕಡೆಯಲ್ಲಿಯೂ ಮಾಸ್ಕನ್ನು ಧರಿಸಿಯೇ ಸ೦ಚಾರ ಮಾಡುವ೦ತೆ ನಮ್ಮ ಅ೦ತರ್ ಜಾಲದ ಮನವಿ. ಅ೦ತರ ಕಾಪಾಡಿ ಕೊವೀಡ್ ನಿ೦ದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿರಿ. ಸರಕಾರದ ನಿಯಮವನ್ನು ಪಾಲಿಸುವಲ್ಲಿ ಬದ್ಧರಾಗಿ.

No Comments

Leave A Comment