ಪರ್ಯಾಯೋತ್ಸವ:ಭಕ್ತರ ವೈದ್ಯಕೀಯ ಉಪಚಾರಕ್ಕಾಗಿ ರಥಬೀದಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನೆ…
ಉಡುಪಿ:ಶ್ರೀಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಆಗಮಿಸುವ ಭಕ್ತರ ವೈದ್ಯಕೀಯ ಉಪಚಾರಕ್ಕಾಗಿ ರಥಬೀದಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಪರ್ಯಾಯೋತ್ಸವ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ್ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ರವಿಚಂದ್ರ ರಾವ್ ಉಚ್ಚಿಲ, ಡಾ.ಸತೀಶ್ ರಾವ್, ಡಾ.ಜಯಂತ್, ಡಾ.ಸ್ವಾತಿ, ಡಾ.ವಿಜಯ್ ನೆಗಳೂರು ,ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಕರ್ವಾಲು, ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿ ಉಪಸ್ಥಿತರಿದ್ದರು.