Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶ್ರೀಲಂಕಾ: ಕಾರಾಗೃಹ ಮಾರಾಮಾರಿ ಪ್ರಕರಣ; ಮಾಜಿ ಜೈಲು ಅಧೀಕ್ಷಕಗೆ ಮರಣದಂಡನೆ ಶಿಕ್ಷೆ

ಕೊಲಂಬೊ: ವೆಲಿಕಡ ಕಾರಾಗೃಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಕೊಲಂಬೊ ಉಚ್ಚ ನ್ಯಾಯಾಲಯ ಮಾಜಿ ಜೈಲು ಅಧೀಕ್ಷಕ ಎಮಿಲ್ ರಂಜನ್ ಅವರಿಗೆ ಮರಣದಂಡನೆ ಸಜೆಯನ್ನು ವಿಧಿಸಿದೆ.

2012ರಲ್ಲಿ ವೆಲಿಕಡ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ಸಂಭವಿಸಿತ್ತು. ಈ ಗಲಭೆಯಲ್ಲಿ 27 ಮಂದಿ ಕೈದಿಗಳು ಕೊಲೆಗೀಡಾಗಿದ್ದರು. 20ಕ್ಕೂ ಹೆಚ್ಚು ಕೈದಿಗಳು ಗಾಯಗೊಂಡಿದ್ದರು.

ವಿಶೇಷ ಪೊಲೀಸ್ ಪಡೆ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಲಲು ಅಘೋಷಿತ ತಪಾಸಣೆಯನ್ನು ಕೈಗೊಂಡ ಸಮಯದಲ್ಲಿ ಕೈದಿಗಳು ಅದನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಈ ಸಂದರ್ಭ ಗಲಭೆ ಏರ್ಪಟ್ಟಿತ್ತು. ಆ ಸಂದರ್ಭ ಅಧೀಕ್ಷಕರಾಗಿದ್ದ ಎಮಿಲ್ ರಂಜನ್ ಅವರು ಕೈದಿಗಳ ಹತ್ಯೆಗೆ ಸಂಚು ರೂಪಿಸಿದ್ದಾಗಿ ಆರೋಪ ಕೇಳಿಬಂದಿತ್ತು.

No Comments

Leave A Comment