ಮತ್ತೆ ಅಟ್ಟಹಾಸ ಮೆರೆದ ಗೋ ಕಳ್ಳರು : ಪೊಲೀಸರು ಮತ್ತು ಭಜರಂಗದಳದ ಕಾರ್ಯಚರಣೆಯಿಂದ ಗೋವುಗಳು ವಶ
ಶಿರ್ವ: ಇನ್ನೋವಾ ಕಾರನ್ನು ಮದುವೆ ವಾಹನದದಂತೆ ಅಲಂಕರಿಸಿದ ಖದೀಮರು ಅದರಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಘಟನೆ ಕಾಪು ತಾಲೂಕಿನ ಶಿರ್ವದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದ್ದು, ಇದೀಗ ಮದುವೆ ಕಾರಿನಂತೆ ಇನ್ನೋವಾ ಕಾರನ್ನು ಎಸ್ಕಾರ್ಟ್ ಮಾಡಿಕೊಂಡು 16 ದನಗಳನ್ನ ಸಾಗಿಸುತ್ತಿರೋ ಘಟನೆಯೊಂದು ನಡೆದಿದೆ.
ಶಿರ್ವ ಮತ್ತು ಕಾಪು ವ್ಯಾಪ್ತಿಯ ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭ ಘಟನೆ ಬೆಳಕಿಗೆ ಬಂದಿದ್ದು, ಒಟ್ಟು 16 ದನಗಳ ಪೈಕಿ 2 ದನಗಳು ಸಾವನ್ನಪ್ಪಿದ್ದು 4 ದನಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಖತರ್ನಾಕ್ ಖದೀಮರು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.