ಉಡುಪಿ:ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಉಗ್ರಾಣ ಮುಹೂರ್ತ
ಉಡುಪಿ: ಶ್ರೀಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ,ಭಕ್ತಾದಿಗಳು ನೀಡುವ ಹೊರೆಕಾಣಿಕೆಗಳನ್ನು ಸಂಗ್ರಹಿಸಲು “ಸುಮೇಧ” ಉಗ್ರಾಣವನ್ನು ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು.
ಕುಚೇಲನು ಶ್ರೀಕೃಷ್ಣನಿಗೆ ಮೂರು ಹಿಡಿ ಅವಲಕ್ಕಿಯನ್ನು ಭಕ್ತಿಯಿಂದ ಅರ್ಪಿಸಿದನು.ಇದನ್ನು ದೇವರು ಸಂತೋಷದಿಂದ ಸ್ವೀಕರಿಸಿ ಅವನಿಗೆ ಸಕಲೈಶ್ವರ್ಯಗಳನ್ನು ನೀಡಿ ಅನುಗ್ರಹಿಸಿದನು.ಪರ್ಯಾಯಯೋತ್ಸವಕ್ಕೆ ಭಕ್ತಾದಿಗಳು ಯಥಾನುಶಕ್ತಿ ಭಕ್ತಿಪೂರ್ವಕ ನೀಡುವ ಕಾಣಿಕೆಯನ್ನು ಸ್ವೀಕರಿಸಿ ಉಡುಪಿ ಶ್ರೀಕೃಷ್ಣದೇವರು ಎಲ್ಲರನ್ನು ಅನುಗ್ರಹಿಸಲಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕಿದಿಯೂರು ಹೋಟೆಲಿನ ಭುವನೇಂದ್ರ ಕಿದಿಯೂರು,ಕಲ್ಸ೦ಕ ಗಿರಿಜಾ ಸಿಲ್ಕಿನ ರಾಜಾರಾಮ್ ಪೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಣೇಶ್, ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷರಾದ ಸೂರ್ಯನಾರಾಯಣ ಉಪಾಧ್ಯಾಯ,ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಮತ್ತು ಪದಾಧಿಕಾರಿಗಳು ಹಾಗೂ ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.