Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ವೈಭವದ ಮೆರವಣಿಗೆಯೊ೦ದಿಗೆ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಅದ್ದೂರಿಯ ಉಡುಪಿ ಪುರಪ್ರವೇಶ…ಪೌರ ಸಮ್ಮಾನ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣಮುಖ್ಯಪ್ರಾಣದೇವರ ಪೂಜಾ ದ್ವೈವಾರ್ಷಿಕ ಪರ್ಯಾಯದ 501 ನೇ ವರ್ಷದ ಶುಭಸಂದರ್ಭದಲ್ಲಿ ಶ್ರೀಕೃಷ್ಣಾಪುರ ಜನಾರ್ದನತೀರ್ಥ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಚತುರ್ಥ ಬಾರಿಗೆ ಸರ್ವಜ್ಞ ಪೀಠಾರೋಹಣಕ್ಕಾಗಿ,ದೇಶಾದ್ಯಂತ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ ಇಂದು ಜೋಡುಕಟ್ಟೆಯಿಂದ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಪುರಪ್ರವೇಶ ಮಾಡಿದರು.

ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ಕಂಡು ಶ್ರೀಚಂದ್ರೇಶ್ವರ ಮತ್ತು ಶ್ರೀಅನಂತಾಸನ ದೇವರನ್ನು ನಮಿಸಿ ಮಧ್ವಾಚಾರ್ಯರಿಗೆ ಪೂಜೆ ಸಲ್ಲಿಸಿ, ಶ್ರೀಕೃಷ್ಣಮಠಕ್ಕೆ ಆಗಮಿಸಿದಾಗ ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಭಾವೀ ಪರ್ಯಾಯ ಶ್ರೀಪಾದರನ್ನು ಬರಮಾಡಿಕೊಂಡು,ಶ್ರೀಕೃಷ್ಣ ಮುಖ್ಯಪ್ರಾಣ,ಮಧ್ವರ ದರ್ಶನ ಮಾಡಿಸಿದರು. ನಂತರ ಕೃಷ್ಣಾಪುರ ಮಠದಲ್ಲಿ ನವಗ್ರಹ ದಾನಾದಿಗಳನ್ನು ನೀಡಿ ಸಂಜೆ 5-22 ಗಂಟೆಗೆ ಮಠ ಪ್ರವೇಶ ಮಾಡಿ ಪಟ್ಟದ ದೇವರಿಗೆ ಮಂಗಳಾರತಿ ಮಾಡಿದರು.

No Comments

Leave A Comment