Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ನ್ಯೂಯಾರ್ಕ್​ ನಲ್ಲಿ ಭೀಕರ ಅಗ್ನಿ ದುರಂತ: 9 ಮಕ್ಕಳು ಸೇರಿ 19 ಮಂದಿ ಸಜೀವ ದಹನ

ನ್ಯೂಯಾರ್ಕ್​: ನ್ಯೂಯಾರ್ಕ್​ ನಗರದಲ್ಲಿ ಅಪಾರ್ಟ್​ಮೆಂಟ್​​ವೊಂದಕ್ಕೆ ಬೆಂಕಿಬಿದ್ದ ಪರಿಣಾಮ 9 ಮಕ್ಕಳು ಸೇರಿ 19 ಜನರು ಮೃತಪಟ್ಟ ದುರ್ಘಟನೆ ನಡೆದಿದೆ. ಬೆಂಕಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ನ್ಯೂಯಾರ್ಕ್​​ ಸಿಟಿಯ ಮೇಯರ್​ ಎರಿಕ್​ ಆಡಮ್ಸ್​​ರ ಹಿರಿಯ ಸಲಹೆಗಾರ ಸ್ಟೆಫನ್​ ರಿಂಜೆಲ್​​ ದೃಢಪಡಿಸಿದ್ದಾರೆ.

ಬೆಂಕಿ ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಸುಮಾರು 13 ಜನರು ಗಂಭೀರಸ್ವರೂಪದ ಗಾಯದಿಂದ ನರಳುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಲ್ಲಿ ಬಹುತೇಕ ಜನರು ಹೊಗೆಯಿಂದ ಉಸಿರುಕಟ್ಟಿ ಸತ್ತವರೇ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬ್ರಾಂಕ್ಸ್ ಟ್ವಿನ್ ಪಾರ್ಕ್ ಅಪಾರ್ಟ್‌ಮೆಂಟ್‌ ಪ್ರದೇಶದಲ್ಲಿರುವ ಒಂದು 19 ಅಂತಸ್ತಿನ ಅಪಾರ್ಟ್​ಮೆಂಟ್​ಗೆ, ಬೆಂಕಿ ಬೀಳುತ್ತಿದ್ದಂತೆ ಅಗ್ನಿಶಾಮಕದಳ, ಪೊಲೀಸರು, ರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಲಾಗಿತ್ತು. ಅಗ್ನಿಶಾಮಕದಳದ ಸುಮಾರು 200 ಮಂದಿ  ಧಾವಿಸಿ, ಕಾರ್ಯಾಚರಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಜೀವ ಸಹಿತ ಇದ್ದು ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರನ್ನು ಮೊದಲು ಅಲ್ಲಿಂದ ಕರೆದೊಯ್ಯಲಾಯಿತು. ಅಂಥವರನ್ನೆಲ್ಲ ಮೊದಲು ಆಸ್ಪತ್ರೆಗೆ ದಾಖಲು ಮಾಡಿ ನಂತರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಹೇಳಿದ್ದಾರೆ.

No Comments

Leave A Comment