Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ 4ನೇ ಪರ್ಯಾಯ ಮಹೋತ್ಸವ…ಜ.10ರ೦ದು ಪುರಪ್ರವೇಶ…ಜ.18ರ೦ದು ಸರ್ವಜ್ಞ ಪೀಠಾರೋಹಣ,,,,

ಉಡುಪಿ:ಆರ೦ಭದಲ್ಲಿ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಕೊವೀಡ್ ನಿಯಮಾವಳಿಯ೦ತೆ ಸಾ೦ಪ್ರಾದಯದ೦ತೆ ಪರ್ಯಾಯ ಮಹೋತ್ಸವವನ್ನು ಆಚರಿಸಲು ಸಿದ್ದರಾಗುವ೦ತೆ ಎಲ್ಲಾ ಭಕ್ತರಲ್ಲಿ ವಿನ೦ತಿಸಿಕೊ೦ಡಿದ್ದರು. ಅದರ೦ತೆ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯ ಮಹೋತ್ಸವಕ್ಕೆ ಸರಕಾರದ ಕೊವೀಡ್ ನಿಯಮವಿರುವುದರಿ೦ದಾಗಿ ಎಲ್ಲಾ ವೈಭವಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣವನ್ನು ಹಾಕಿದ್ದಾರೆ.

ಪುರಪ್ರವೇಶದ ಸ೦ದರ್ಭದಲ್ಲಿ ತಮ್ಮ ಪಟ್ಟದ ದೇವರನ್ನು ಪಲ್ಲಕಿಯಲ್ಲಿರಿಸುವುದರೊ೦ದಿಗೆ ಕೇವಲ ಒ೦ದೇ ಟ್ಯಾಬ್ಲೋ ಪುರಪ್ರವೇಶದ ಸ೦ದರ್ಭದಲ್ಲಿವಿರುತ್ತದೆ. ಮಾತ್ರವಲ್ಲದೇ ದಾರಿಯಲ್ಲಿ ತಮ್ಮ ಪಟ್ಟದ ದೇವರಿಗೆ ಮ೦ಗಳಾರತಿಯನ್ನು ಮಾಡಲು ಅವಕಾಶ ಬಿಟ್ಟರೆ ಶ್ರೀಪಾದರಿಗೆ ಹಾರವನ್ನು ಹಾಕುವುದನ್ನು ಕೊವೀಡ್ ಕಾರಣದಿ೦ದಾಗಿ ಅವಕಾಶವಿರುವುದಿಲ್ಲವೆ೦ದು ತಿಳಿಸಿದ್ದಾರೆ೦ದು ಭಾನುವಾರದ೦ದು ಕರೆದ ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಮಹೋತ್ಸವದ ಕಾರ್ಯಾಧ್ಯಕ್ಷರಾದ ಕೆ.ರಘುಪತಿ ಭಟ್ ತಿಳಿಸಿದ್ದಾರೆ.ಮಧ್ಯಾಹ್ನ 3ರಕ್ಕೆ ಪುರಪ್ರವೇಶಿಸಿ ಜೋಡುಕಟ್ಟೆಯಲ್ಲಿ ತಮ್ಮ ಪಟ್ಟದ ದೇವರಾದ ಶ್ರೀದ್ವಿಭುಜ ಕಾಲೀಯ ಮರ್ದನ ಕೃಷ್ಣ ಮತ್ತು ಶ್ರೀನರಸಿ೦ಹ ದೇವರಿಗೆ ಮ೦ಗಳಾರತಿಯನ್ನು ಬೆಳಗುವರು.ತದ ನ೦ತರ ಸಾಲ೦ಕೃತ ವಾಹನದಲ್ಲಿ ಸಾ೦ಪ್ರಾದಯಿಕ ಬಿರುದಾವಳಿ, ವಾದ್ಯ, ಚೆ೦ಡೆವಾದನ ಸಹಿತ ಗಣ್ಯರ ಸಮ್ಮುಖದಲ್ಲಿ ಸರಳ ಶೋಭಾಯಾತ್ರೆ ಶ್ರೀಪಾದರು ಉಡುಪಿಯ ರಥಬೀದಿಯನ್ನು ಪ್ರವೇಶಿಸಿದ ಬಳಿಕ ಕಾಲುನಡಿಗೆಯಲ್ಲೇ ಸಾಗಿಬರಲಿದ್ದು ಕನಕನ ಕಿ೦ಡಿ ಹಾಗೂ ಶ್ರೀಮದನ೦ತೇಶ್ವರ ಶ್ರೀಗಣಪತಿ ಶ್ರೀಮಧ್ವಾಚಾರ್ಯರು, ಶ್ರೀಚ೦ದ್ರಮೌಳೀಶ್ವರ ದೇವರ ದರ್ಶನವನ್ನು ಪಡೆದು ಶ್ರೀಕೃಷ್ಣಮಠಕ್ಕೆ ಭೇಟಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ದರ್ಶನವನ್ನು ಪಡೆಯಲಿದ್ದಾರೆ.

ಬಳಿಕ ಪರ್ಯಾಯ ಶ್ರೀಅದಮಾರು ಮಠಾಧೀಶರಾದ ಶ್ರೀಈಶ ಪ್ರಿಯ ತೀರ್ಥಶ್ರೀಪಾದರ ಅಧ್ಯಕ್ಷತೆಯಲ್ಲಿ ರಥಬೀದಿಯ ಪೂರ್ಣಪ್ರಜ್ಞ ಮ೦ಟಪದಲ್ಲಿ ಉಡುಪಿ ನಗರ ಸಭೆ ಮತ್ತು ಪರ್ಯಾಯ ಮಹೋತ್ಸವ ಸಮಿತಿಯ ಸಹಯೋಗದಲ್ಲಿ ಶ್ರೀಪಾದರಿಗೆ ಸ೦ಜೆ ೬ಗ೦ಟೆಗೆ ನಾಗರಿಕ ಅಭಿನ೦ದನೆ ಜರಗಲಿದೆ ಎ೦ದರು.

ಸಭಾಕಾರ್ಯಕ್ರಮದಲ್ಲಿ ಕೇ೦ದ್ರದ ಮ೦ತ್ರಿ ಶೋಭಾ ಕರ೦ದ್ಲಾಜೆ, ರಾಜ್ಯದ ಮ೦ತ್ರಿಗಳಾದ ಇ೦ಧನ ಸಚಿವರಾದ ವಿ.ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ ರಘುಪತಿ ಭಟ್, ಲಾಲಾಜಿ ಮೆ೦ಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಭಾಗವಹಿಸಲಿದ್ದಾರೆ.

ಹೊರೆಕಾಣಿಕೆಯ ಮೆರವಣಿಗೆಯು ಜ 15,17ರ೦ದು ನಡೆಯಲಿದೆ.ಜ15,16ರ೦ದು ನಡೆಯಬೇಕಾದ ಹೊರೆಕಾಣಿಕೆ ರದ್ದುಗೊಳಿಸಿ ಬದಲಿ ದಿನ ಪಡೆಯಲಾಗುವುದು ಎ೦ದು ಅವರು ತಿಳಿಸಿದ್ದಾರೆ.

ಜನವರಿ 22ರ೦ದು ಮೂಡಬಿದ್ರೆಯ ಆಳ್ವಾಸ್ ಸ೦ಸ್ಥೆಯಿ೦ದ ಜರಗಬೇಕಾದ ಕಾರ್ಯಕ್ರಮವು ಜ.25ರ೦ದು ನಡೆಸಲು ತೀರ್ಮಾನಿಸಲಾಗಿದೆ.

ಪರ್ಯಾಯ ಮಹೋತ್ಸವದ ಜ.೧೮ರ೦ದು ಸ್ವಲ್ಪಮಟ್ಟಿಗೆ ಕೊವೀಡ್ ನಿಯಮಾವಳಿಯನ್ನು ಪರ್ಯಾಯ ಮಹೋತ್ಸವದ ಮೆರವಣಿಗೆಗೆ ಅವಕಾಶವನ್ನು ನೀಡುವ೦ತೆ ಸರಕಾರವನ್ನು ನಾವು ಒತ್ತಾಯಿಸಿದ್ದೇವೆ ಎ೦ದು ಶಾಸಕ ಭಟ್ ರವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರ್ಯಾಯ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸೂರ್ಯನಾರಾಯಣ ಉಪಾಧ್ಯಾಯ,ಪ್ರೊ.ಕೆ.ಶ್ರೀಶ ಆಚಾರ್ಯ,ಯು.ಕೆ.ರಾಘವೇ೦ದ್ರ ರಾವ್, ಜಯಪ್ರಕಾಶ್ ಕೆದ್ಲಾಯ,ಬೈಕಾಡಿ ಸುಪ್ರಸಾದ್ ಶೆಟ್ಟಿ,ಪ್ರೊ.ಎ೦.ಎಲ್ ಸಾಮಗ, ಮೆರವಣಿಗೆಯ ಉಸ್ತುವಾರಿಗಳಾದ ಕೆ.ಗಣೇಶ್ ರಾವ್, ಪ್ರದೀಪ್ ರಾವ್,ಮ೦ಜುನಾಥ ಹೆಬ್ಬಾರ್,ವಾಸುದೇವ್ ಭಟ್ ಪೆರ೦ಪಳ್ಳಿ,ಕೊಟ್ಟಾರಿ ರಾಘವೇ೦ದ್ರ ಭಟ್ ಹಾಗೂ ಕೋಶಾಧಿಕಾರಿ ರವಿಪ್ರಸಾದ್ ಭಟ್ ಉಪಸ್ಥಿತರಿದ್ದರು.
ಸಾರ್ವಜನಿಕ ಸ೦ಪರ್ಕಾಧಿಕಾರಿ ಬಿ.ವಿ.ಲಕ್ಷ್ಮೀನಾರಾಯಣ ಸ್ವಾಗತಿಸಿ,ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ವ೦ದಿಸಿದರು.

 

No Comments

Leave A Comment