ಹಾಲಿವುಡ್ ನ ಖ್ಯಾತ ಹಿರಿಯ ನಿರ್ದೇಶಕ ಪೀಟರ್ ಬೊಗ್ಡಾನೋವಿಚ್ ನಿಧನ
ವಾಷಿಂಗ್ಟನ್: ಆಸ್ಕರ್ ಪ್ರಶಸ್ತಿ ನಾಮಾಂಕಿತ ನಿರ್ದೇಶಕ, ಹಾಲಿವುಡ್ ನ ಸ್ವರ್ಣಯುಗದ ಚಾಂಪಿಯನ್ ಎಂದು ಕರೆಯಲ್ಪಡುವ ಪೀಟರ್ ಬೊಗ್ಡಾನೋವಿಚ್ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಹಳೆ ಹಾಲಿವುಡ್ ಮತ್ತು ಹೊಸ ಯುಗದ ಹಾಲಿವುಡ್ ಚಿತ್ರಗಳ ಸೇತುವೆಯಾಗಿ ಕೆಲಸ ಮಾಡಿದ್ದ ಚಿತ್ರ ನಿರ್ದೇಶಕ, ವಿಮರ್ಶಕರಾಗಿದ್ದ ಪೀಟರ್ ಬೊಗ್ಡಾನೋವಿಚ್ ಇಂದು ನಸುಕಿನ ಜಾವ ಲಾಸ್ ಏಂಜಲೀಸ್ ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಸಮಸ್ಯೆಯಿಂದ ಮರಣ ಹೊಂದಿದ್ದಾರೆ ಎಂದು ಅವರ ಪುತ್ರಿ ಅಂಟೊನಿಯಾ ಬೊಗ್ದನೊವಿಚ್ ತಿಳಿಸಿದ್ದಾರೆ.
ತಮ್ಮ ವೃತ್ತಿ ಜೀವನದ ಆರಂಭದಲ್ಲಿ ದ ಲಾಸ್ಟ್ ಪಿಕ್ಚರ್ ಶೋ, ವಾಟ್ಸಪ್ ಡಾಕ್ಟರ್, ಪೇಪರ್ ಮೂನ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. 1971ರಲ್ಲಿ ತೀವ್ರ ವಿಮರ್ಶೆಗೆ ಒಳಗಾಗಿದ್ದ ಕಪ್ಪು ಬಿಳುಪು ಕ್ಲಾಸಿಕಲ್ ಚಿತ್ರ ‘ಲಾಸ್ಟ್ ಪಿಕ್ಚರ್ ಶೋ’ ನಿರ್ದೇಶನ ಅವರ ವೃತ್ತಿಬದುಕಿನಲ್ಲಿ ಮೈಲಿಗಲ್ಲು. ಅದು 8 ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು. ಖ್ಯಾತ ಸಿನೆಮಾಗಳಾದ ಮಾಸ್ಕ್ , ಡೈಸಿ ಮಿಲ್ಲರ್, ಸಂಗೀತ ಪ್ರಧಾನ ಚಿತ್ರ ಅಟ್ ಲಾಂಗ್ ಲಾಸ್ಟ್ ಲವ್ ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದಾರೆ.