Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

ಕಾಪು:ದಂಡತೀರ್ಥ ಮಠಕ್ಕೆ ಹೋಗುವ ನೂತನವಾಗಿ ನಿರ್ಮಿಸಿರುವ “ಸ್ವಾಗತ ಗೋಪುರ” ಉದ್ಘಾಟನೆ

ಕಾಪು: ರಾಷ್ಟ್ರೀಯ ಹೆದ್ದಾರಿಯಿಂದ ದಂಡತೀರ್ಥ ಮಠಕ್ಕೆ ಹೋಗುವ ಪ್ರವೇಶ ದ್ವಾರಕ್ಕೆ ನೂತನವಾಗಿ ನಿರ್ಮಿಸಿರುವ ಸ್ವಾಗತ ಗೋಪುರವನ್ನು ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಹಿಂದೆ ಜ್ಞಾನದಾನ ,ಅನ್ನದಾನದ ಜೊತೆಗೆ ಗುರುಕುಲ ಪದ್ಧತಿಯಲ್ಲಿ ವಿದ್ಯಾಭ್ಯಾಸ ನಡೆಯುತ್ತಿದ್ದ ಜಾಗ.ಈ ಗುರುಕುಲದಲ್ಲಿ ಆಚಾರ್ಯಮಧ್ವರು ವಾಸದೇವನಾಗಿ ವಿದ್ಯಾರ್ಜನೆ ಮಾಡಿದುದರಿಂದ ಪವಿತ್ರ ಕ್ಷೇತ್ರವಾಗಿದೆ.ಮಧ್ವ ಮತದ ಭಕ್ತಿಮಾರ್ಗದ ತತ್ವ ಪ್ರಸಾರ ಹೆಚ್ಚಾಗಿ ಜನರು ಇಲ್ಲಿಗೆ ಬರುವಂತಾಗಲಿ ಎಂದು ಅನುಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿ ಹಾಗೂ ಮುಖ್ಯ ಅಥಿತಿಗಳಾಗಿ ಮಂಗಳೂರು ಶಾರದಾ ಸಮೂಹ

ಸಂಸ್ಥೆಗಳ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಶುಭ ಹಾರೈಸಿದರು. ದಂಡತೀರ್ಥ ಪ್ರತಿಷ್ಠಾನದ ಡಾ. ಸೀತಾರಾಮ ಭಟ್ ಸ್ವಾಗತಿಸಿದರು.ನೀಲಾನಂದ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment