ಅಮೆರಿಕಾ; ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ 13 ಮಂದಿ ಸಾವು
ಫಿಲಿಡೆಲ್ಫಿಯಾ: ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ದುರಂತದಲ್ಲಿ ಏಳು ಮಕ್ಕಳು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ.
ಸಾರ್ವಜನಿಕ ವಸತಿ ಪ್ರಾಧಿಕಾರ ಒಡೆತನದ ನಗರದ ಫೇರ್‌ಮೌಂಟ್ ಪರಿಸರದಲ್ಲಿದ್ದ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಅವಘಡ ನಡೆದಿದ್ದು, ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು 50 ನಿಮಿಷ ಬೇಕಾಯಿತು. ಆದರೆ ಕಟ್ಟಡದಲ್ಲಿ ನಾಲ್ಕು ಸ್ಮೋಕ್ ಡಿಟೆಕ್ಟರ್‌ಗಳಿದ್ದರೂ, ಅವು ವಿಫಲಗೊಂಡ ಕಾರಣ ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿ ಶಾಮಕ ದಳ ತಿಳಿಸಿದೆ ಈ ಕ್ರಮದಲ್ಲಿ ಏಳು ಮಕ್ಕಳು ಸೇರಿದಂತೆ ಎಂಟು ಜನರು ಎರಡು ನಿರ್ಗಮನ ಮಾರ್ಗಗಳ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಫಿಲಡೆಲ್ಫಿಯಾ ಉಪ ಅಗ್ನಿಶಾಮಕ ಆಯುಕ್ತ ಕ್ರೇಗ್ ಮರ್ಫಿ ಹೇಳಿದ್ದಾರೆ.
ಈವರೆಗೆ ತಾವು ನೋಡಿದ ಅತ್ಯಂತ ಭಯಾನಕ ಅಗ್ನಿ ಅವಘಡವಾಗಿದೆ ಮೇಯರ್ ಜಿಮ್ ಕೆನ್ನಿ ಹೇಳಿದ್ದಾರೆ. ಕಟ್ಟಡವನ್ನು ಎರಡು ಕುಟುಂಬಗಳಿಗೆ ಅನುಕೂಲವಾಗುವಂತೆ ಪರಿವರ್ತಿಸಲಾಗಿದ್ದು, ಸುಮಾರು 26 ಮಂದಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಗ್ನಿಶಾಮಕ ಆಯುಕ್ತ ಕ್ರೇಗ್ ಮರ್ಫಿ ಹೇಳಿದ್ದಾರೆ.