Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ರಿಂಗ್ ನೆಟ್ ಬಳಕೆಗೆ ವಿರೋಧ; ಮೀನುಗಾರರ ನಡುವೆ ಪರಸ್ಪರ ವಾಗ್ವಾದ; ಸಮುದ್ರ ಮಧ್ಯದಲ್ಲಿ ಬೋಟ್ ಗೆ ಬೆಂಕಿ!

ವಿಶಾಖಪಟ್ಟಣಂ: ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ರಿಂಗ್ ನೆಟ್ ಗಳ ಬಳಕೆಯನ್ನು ವಿರೋಧಿಸಿದ ವಿಷಯವಾಗಿ ಮೀನುಗಾರರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ಬೋಟ್ ಗೆ ಸಮುದ್ರದ ಮಧ್ಯೆ ಬೆಂಕಿ ಹಚ್ಚಿರುವ ಘಟನೆ ವಿಶಾಖಪಟ್ಟಣಂ ನಲ್ಲಿ ನಡೆದಿದೆ.

ಬಂಗಾಳ ಕೊಲ್ಲಿಯಲ್ಲಿ ಸಮುದ್ರದ ಹಲವೆಡೆ ಮೀನುಗಾರಿಕೆಗಾಗಿ ರಿಂಗ್ ನೆಟ್ ಗಳ ಬಳಕೆಗೆ ನಿರ್ಬಂಧಿಸಲಾಗಿದೆ. ವಿಶಾಖಪಟ್ಟಣಂ ನ ಚಿನ್ನಜಾಲರಿಪೇಟ, ಪೆದ್ದಜಾಲರಿಪೇಟಗಳ ಮೀನುಗಾರರು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಒಂದು ಗುಂಪು ಸಮುದ್ರದಲ್ಲಿ ನಿರ್ಬಂಧಿತ ಪ್ರದೇಶಗಳಲ್ಲಿಯೂ ರಿಂಗ್ ನೆಟ್ ನ್ನು ಬಳಸಿ ಮೀನುಗಾರಿಕೆಗೆ ಮುಂದಾಯಿತು. ಆದರೆ ಸಾಂಪ್ರದಾಯಿಕ ಶೈಲಿಯ ಬಲೆಗಳನ್ನು ಬಳಕೆ ಮಾಡುವ ಮೀನುಗಾರರ ಮತ್ತೊಂದು ಗುಂಪು ಇದನ್ನು ಆಕ್ಷೇಪಿಸಿದಾಗ ಪರಸ್ಪರ ವಾಗ್ವಾದ ತಾರಕಕ್ಕೇರಿ ಮೀನುಗಾರರ ಒಂದು ಗುಂಪು ಮತ್ತೊಂದು ಗುಂಪಿನ ಬೋಟ್ ಗೆ ಬೆಂಕಿ ಹೆಚ್ಚಿದ ಆ ವೇಳೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ವಿಶಾಖಪಟ್ಟಣಂ ನಲ್ಲಿ ಸಾಂಪ್ರದಾಯಿಕ ಶೈಲಿಯ ನೆಟ್ ಗಳನ್ನು ಬಳಕೆ ಮಾಡುವವರು ಹಾಗೂ ರಿಂಗ್ ನೆಟ್ ಗಳನ್ನು ಬಳಕೆ ಮಾಡುವವರ ನಡುವೆ ಆಗಾಗ್ಗೆ ಈ ರೀತಿಯ ವಾಗ್ವಾದಗಳು ನಡೆಯುತ್ತಿರುತ್ತವೆ. ರಿಂಗ್ ನೆಟ್ ಬಳಕೆ ಮಾಡಿದಲ್ಲಿ ಸಣ್ಣ ಜಲಚರಗಳೂ ಬಲೆಗೆ ಸಿಲುಕಲಿದ್ದು, ಇದರಿಂದಾಗಿ ಜಲಚರಗಳ ಸಂಖ್ಯೆಯೇ ಇಳಿಮುಖವಾಗುತ್ತದೆ ಎಂಬುದು ಸಾಂರದಾಯಿಕ ಶೈಲಿಯ ಬಲೆಗಳನ್ನು ಬಳಕೆ ಮಾಡುವವರ ಆರೋಪವಾಗಿದೆ.

No Comments

Leave A Comment