Log In
BREAKING NEWS >
ಉಡುಪಿಯ ಕಲ್ಸ೦ಕದ ರೋಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಆರ೦ಭವಾಗಿದ್ದು ಪ್ರತಿ ನಿತ್ಯವೂ ಸಾಯ೦ಕಾಲ 4ರಿ೦ದ 9ಗ೦ಟೆಯವರೆಗೆ ವೀಕ್ಷಿಸಲು ಅವಕಾಶವಿದೆ....

ಪರ್ಯಾಯ ಶ್ರೀಕೃಷ್ಣಾಪುರ ಮಠದ ವೆಬ್ ಸೈಟ್ ಲೋಕಾರ್ಪಣೆ…

ಕಾಪು ದಂಡತೀರ್ಥ ಮಠದಲ್ಲಿ ಭಾವೀ ಪರ್ಯಾಯ ಕೃಷ್ಣಾಪುರ ಮಠದ ವೆಬ್ ಸೈಟ್ (www.krishnapuramatha.org)ನ್ನು ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿ ಇದರಿಂದ ದೇಶ ವಿದೇಶಗಳಲ್ಲಿರುವ ಭಕ್ತಾಧಿಗಳಿಗೆ ಪರ್ಯಾಯ ಮಠದ ಪ್ರತಿಯೊಂದು ವಿಷಯವನ್ನು ತಿಳಿಯಬಹುದು.ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರು, ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ರಾವ್,ಶ್ರೀಶ ಆಚಾರ್ಯ,ಸೀತಾರಾಮ ಭಟ್ ವೆಬ್ ಸೈಟನ್ನು ರಚನೆ ಮಾಡಿದ ವಾದಿರಾಜ ಆಚಾರ್ಯ ಮತ್ತು ವಸಂತ ಕೇದಗೆ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment