ಭಾವೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಸರ್ವ ಸಮಿತಿಯ ಸಭೆ
ಉಡುಪಿ ರಥಬೀದಿಯ ಶ್ರೀಕೃಷ್ಣ ಸಭಾಮಂದಿರದಲ್ಲಿ,ಭಾವೀ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಸರ್ವ ಸಮಿತಿಯ ಸಭೆಯು ಜರಗಿತು.
ಉಡುಪಿ ಶಾಸಕರೂ ಪರ್ಯಾಯ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರಘುಪತಿ ಭಟ್ ರವರು ಪರ್ಯಾಯದ ಒಟ್ಟು ರೂಪುರೇಷೆಯನ್ನು ವಿವರಿಸಿದರು.ಪರ್ಯಾಯ ಮಹೋತ್ಸವದ ಸಮಿತಿಯ ಅಧ್ಯಕ್ಷರಾದ ಕೆ.ಸೂರ್ಯನಾರಾಯಣ ಉಪಾಧ್ಯಾಯರು ಸ್ವಾಗತಿಸಿದರು.ಆರ್ಥಿಕ ಸಮಿತಿಯ ಜಯಪ್ರಕಾಶ ಕೆದ್ಲಾಯ,ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ,ಸಾಂಸ್ಕೃತಿಕ ಸಮಿತಿಯ ಪ್ರೊ. ಎಂ. ಎಲ್. ಸಾಮಗರು, ಉಪಾಧ್ಯಕ್ಷರಾದ ವಿನಯಕುಮಾರ್ ಸೊರಕೆ, ವೈದ್ಯಕೀಯ ಸಮಿತಿಯ ಡಾ.ರವಿಚಂದ್ರ ಉಚ್ಚಿಲ, ಮೆರವಣಿಗೆ ಸಮಿತಿಯ ಗಣೇಶ ರಾವ್, ಊಟೋಪಚಾರದ ಮಂಜುನಾಥ ಹೆಬ್ಬಾರ್ ತಮ್ಮ ಸಮಿತಿಯ ಸಿದ್ಧತೆಗಳನ್ನುತಿಳಿಸಿದರು.
ಎಸ್.ಸಿ.ಡಿ.ಸಿ.ಸಿ.ಬ್ಯಾಂಕಿನಿಂದ 5 ಲಕ್ಷ ರೂ.ದೇಣಿಗೆಯ ಚೆಕ್ ನ್ನು ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಹಾಗೂ ಇಂದ್ರಾಳಿ ಜಯಕರ ಶೆಟ್ಟಿಯವರು ನೀಡಿದರು.
ಸಗ್ರಿ ಗೋಪಾಲಕೃಷ್ಣ ಸಾಮಗರು,ಕಟೀಲು ಅರ್ಚಕರಾದ ಅನಂತ ಅಸ್ರಣ್ಣ,ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಪ್ರವೀಣ ಉಪಾಧ್ಯಾಯರು ಕಾರ್ಯಕ್ರಮ ನಿರ್ವಹಿಸಿ, ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಧನ್ಯವಾದವಿತ್ತರು.