Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಉಡುಪಿ:ಶ್ರೀಕೃಷ್ಣಮಠದಲ್ಲಿ ನಾಗಮಂಡಲ ಸ೦ಪನ್ನ…

ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀಅದಮಾರು ಮಠದ ಪರ್ಯಾಯದ ಮುಕ್ತಾಯದ ಸ೦ದರ್ಭದಲ್ಲಿ ತಕ್ಷಕ ಬಿಲದ ಸನ್ನಿಧಿಯ ಮುಂಭಾಗದಲ್ಲಿ ಸಂಪ್ರದಾಯದಂತೆ ದ್ವೈವಾರ್ಷಿಕವಾಗಿ ನಡೆಯುವ ನಾಗಮಂಡಲವು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಹಾಲಿಟ್ಟು ಸೇವೆ ನಡೆದು ನಂತರ ವಿದ್ಯುದ್ದೀಪ ಇಲ್ಲದೆ ಅನಿಲದೀಪ(ಗ್ಯಾಸ್ ಲೈಟ್)ವನ್ನು ಉಪಯೋಗಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಹಾಗೂ ನಾಗಕನ್ನಿಕೆಗೆ ನೈಸರ್ಗಿಕ ಬಣ್ಣ ಉಪಯೋಗಿಸಿದ ಉಡುಪಿ ಕೈಮಗ್ಗದ ಸೀರೆ ಧರಿಸಿ ನರ್ತಿಸಿದ ಮಂಡಲ ಸೇವೆಯು ನಡೆಯಿತು.

 

No Comments

Leave A Comment