
ಉಡುಪಿಯ ಶ್ರೀಕೃಷ್ಣದೇವರಿಗೆ ಕಾಶೀ ಮಠಾಧೀಶರಿ೦ದ ಪಚ್ಚಕಲ್ಲಿನ ಚಿನ್ನದ ಸರ ಸಮರ್ಪಣೆ…
ಉಡುಪಿ:ಗೌಡ ಸಾರಸ್ಪತ ಬ್ರಹ್ಮಣ ಸಮಾಜದ ಗುರುವರಿಯರಾದ ಶ್ರೀಸ೦ಸ್ಥಾನ ಕಾಶೀಮಠಾಧೀಶರಾದ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಉಡುಪಿಯ ಶ್ರೀಕೃಷ್ಣನಿಗೆ ಪಚ್ಚಕಲ್ಲಿನ ಚಿನ್ನದ ಸರವನ್ನು ಶುಕ್ರವಾರದ೦ದು ಪರ್ಯಾಯ ಶ್ರೀಅದಮಾರು ಮಠಾಧೀಶರಾದ ಶ್ರೀಈಶ ಪ್ರಿಯ ತೀರ್ಥಶ್ರೀಪಾದರಿಗೆ ತಮ್ಮ ಶಿಷ್ಯವೃ೦ದದವರ ಮುಖಾ೦ತರ ಹಸ್ತಾ೦ತರಿಸುವುದರೊ೦ದಿಗೆ ಸಮರ್ಪಿಸಿದ್ದಾರೆ.
ಪ್ರಪಂಚದ ಎಲ್ಲ ವಸ್ತುಗಳೂ ಭಗವಂತನ ಕೊಡುಗೆಗಳಾಗಿವೆ ಎಂಬ ಅನುಸಂಧಾನದ ಮೂಲಕ ದೇವರಿಗೆ ವಸ್ತುಗಳ ಸಮರ್ಪಣೆಯಾಗಬೇಕು. ಶ್ರೀಕೃಷ್ಣನ ವಿಗ್ರಹದಲ್ಲಿ ದೇವರನ್ನು ನೋಡಿ ಈ ಹಾರವನ್ನು ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಸಮರ್ಪಿಸುತ್ತಿಿದ್ದಾಾರೆ ಎಂದು ಶ್ರೀಈಶಪ್ರಿಿಯತೀರ್ಥ ಶ್ರೀಪಾದರು ತಿಳಿಸಿದರು.
ಶ್ರೀಕೃಷ್ಣನ ಅಂತರಂಗದ ಭಕ್ತನಾಗಿದ್ದ ಉದ್ದವನಿಗೆ ಶ್ರೀಕೃಷ್ಣನ ಅಗಲುವಿಕೆ ತಾಳಲಾರದೆ ಹೋಯಿತು. ಆಗ ಶ್ರೀಕೃಷ್ಣ ತಾನು ಗ್ರಂಥದಲ್ಲಿ (ಶ್ರೀಮದ್ಭಾಾಗವತ) ಮತ್ತು ಜ್ಞಾನಿಗಳಲ್ಲಿರುವುದಾಗಿ ತಿಳಿಸಿದ. ಜ್ಞಾನವೆಂದರೆ ಯಾವುದನ್ನು ತಿಳಿದುಕೊಂಡರೆ ಭಗವಂತನನ್ನು ತಿಳಿಯಲಾಗುತ್ತದೋ ಅದು. ಮಧ್ವಾಾಚಾರ್ಯರು ಸ್ವತಂತ್ರ ತತ್ವ ಮತ್ತು ಅಸ್ವತಂತ್ರ ತತ್ವ ಎಂಬೆರಡು ಚಿಂತನೆಗಳನ್ನು ತಿಳಿಸಿದ್ದಾಾರೆ. ಸ್ವತಂತ್ರ ತತ್ವವೆಂದರೆ ಭಗವಂತನ ಅರಿವು. ಉಳಿದೆಲ್ಲವೂ ಭಗವಂತನ ಅಧೀನವಾದ ಅಸ್ವತಂತ್ರ ತತ್ವ. ಮಧ್ವಾಾಚಾರ್ಯರು ಭಗವಂತನ ವಿಶೇಷ ಸನ್ನಿಿಧಾನವಿರುವ ಶ್ರೀಕೃಷ್ಣನನ್ನು ಪ್ರತಿಷ್ಠಾಾಪಿಸಿ ಸಾಧಕರಿಗೆ ಅನುವು ಮಾಡಿಕೊಟ್ಟರು ಎಂದು ಶ್ರೀಪಾದರು ನುಡಿದರು.
ಈ ಸ೦ದರ್ಭದಲ್ಲಿ ಮ೦ಗಳೂರಿನ ನರೇಶ ಶೆಣೈ, ಅತುಲ್ ಕುಡ್ವ ಮುಲ್ಕಿ, ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಾಲಯದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈ, ಟ್ರಸ್ಟಿಗಳಾದ ಎ೦ ವಿಶ್ವನಾಥ ಭಟ್, ಕೋಟೇಶ್ವರದ ದಿನೇಶ್ ಕಾಮತ್, ಹಾಗೂ ಶ್ರೀಧರ ಕಾಮತ್ , ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕೆ ರಾಘವೇ೦ದ್ರ ಕಿಣಿ, ಉದ್ಯಮಿ ಯು.ವೆ೦ಕಟೇಶ್ ಭಟ್ ,ಉಡುಪಿಯ ಶಾಸಕರಾದ ಕೆ.ರಘುಪತಿ ಭಟ್ ಮಠದ ವ್ಯವಸ್ಥಾಪಕರಾದ ಗೋವಿ೦ದರಾಜ್ ರವರು ಉಪಸ್ಥಿತರಿದ್ದರು.