ನಗರಾಭಿವೃದ್ಧಿ ಪ್ರಾಧಿಕಾರದ ತಮ್ಮ ಅವಧಿ ಮುಕ್ತಾಯ:ಜಿಲ್ಲಾಧಿಕಾರಿಗಳಿಗೆ ರಾಘವೇಂದ್ರ ಕಿಣಿಯವರಿ೦ದ ರಾಜೀನಾಮೆ ಸಲ್ಲಿಕೆ
ಉಡುಪಿ ಡಿ.29 : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೆ. ರಾಘವೇಂದ್ರ ಕಿಣಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ.ಅವಧಿ ಮುಗಿದಿದೆ ಪಕ್ಷದ ಆದೇಶದ೦ತೆ ಕರ್ತವ್ಯವನ್ನು ನಿರ್ವಹಿಸಿದ್ದನೆ ಎ೦ದು ಅವರು ಕರಾವಳಿ ಕಿರಣ ಡಾಟ್ ಕಾ೦ ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಹೊರತು ಯಾವುದೇ ಗೊ೦ದಲವಿಲ್ಲ ವೆ೦ದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಆತ್ಮೀಯರೇ ಭಾರತೀಯ ಜನತಾ ಪಕ್ಷದ ಆದೇಶದಂತೆ ಒಬ್ಬ ಅತ್ಯಂತ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ 18 ತಿಂಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ನೀಡಿ ಪಾರದರ್ಶಕತೆಯಿಂದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಆಡಳಿತ ಕೆಲಸ ಮಾಡಿದೆ. ಇದೀಗ ಪಕ್ಷದ ಹಿರಿಯರ ಆದೇಶದಂತೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ತಮ್ಮ ಕಾರ್ಯಾವಧಿಯಲ್ಲಿ ಸಹಕರಿಸಿದ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಕಾಪು ಶಾಸಕ ಲಾಲಾಜಿ ಮೆಂಡನ್ ಅವರಿಗೆ ಹಾಗೂ ಪ್ರಾಧಿಕಾರದ ಗೌರವಾನ್ವಿತ ಸದಸ್ಯರು, ಸಿಬ್ಬಂದಿ ವರ್ಗ, ಜನತೆಯ ಸೇವೆ ಅವಕಾಶ ನೀಡಿದ ಪಕ್ಷದ ಹಿರಿಯರಿಗೆ ಮತ್ತು ಜನತೆಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ರಾಘವೇಂದ್ರ ಕಿಣಿ ಅವರು ಕಳೆದ 18 ತಿಂಗಳಿಂದ ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಹೆಸರು ಗಳಿಸಿದ್ದರು.
ತಮ್ಮ ಅವಧಿ ಮುಗಿದ ಕಾರಣ ಜಿಲ್ಲಾಧಿಕಾರಿಗಳಿಗೆ ಪತ್ರಮುಖೇನ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.