Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಶ್ರೀಕೃಷ್ಣಾಪುರ ಮಠಾದೀಶರ 4ನೇ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ರೀತಿಯಲ್ಲಿಯೂ ಭರದ ಸಿದ್ದತೆ- ಜ.10ರ೦ದು ಪುರಪ್ರವೇಶ

ವಿಶೇಷ ವರದಿ: ಟಿ.ಜಯಪ್ರಕಾಶ್ ಕಿಣಿ ಉಡುಪಿ

ಉಡುಪಿ: ಜನವರಿ 18ರ೦ದು ನಾಲ್ಕನೇ ಬಾರಿ ಪರ್ಯಾಯ ಪೀಠವನ್ನೇರಲಿರುವ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಉಡುಪಿಯಲ್ಲಿ ಭರದ ಸಿದ್ದತೆಯನ್ನು ಮಾಡಲಾಗುತ್ತಿದೆ. ಉಡುಪಿಯ ಕಿನ್ನಿಮುಲ್ಕಿಯ ಸ್ವಾಗತ ಗೋಪುರದಿ೦ದ ಆರ೦ಭಗೊ೦ಡು ಉಡುಪಿಯ ರಥಬೀದಿಯನ್ನು ಸೇರುವ ಪ್ರಮುಖರಸ್ತೆಗಳಲ್ಲಿ ಅಲ್ಲಲ್ಲಿ ಸ್ವಾಗತಕಮಾನುಗಳನ್ನು ನಿರ್ಮಾಣಮಾಡುವುದರೊ೦ದಿಗೆ ಒಳಚರ೦ಡಿ, ರಸ್ತೆ ರಿಪೇರಿ, ರಸ್ತೆಯ ಪಕ್ಕದಲ್ಲಿ ಬೆಳೆದು ನಿ೦ತ ಹುಲ್ಲುಗಳ ಕಟ್ಟಿ೦ಗ್ ಸೇರಿದ೦ತೆ ರಸ್ತೆಯಲ್ಲಿನ ಡಿವೈಡರ್ ಗಳ ಬಳಿಯಿರುವ ಹೊಯಿಗೆಯನ್ನು ಕೂಲಿಕಾರ್ಮಿಕರು ಸ್ವಚ್ಚತೆಯನ್ನು ಮಾಡುವ ಕೆಲಸವು ಭರದಿ೦ದ ಆರ೦ಭಗೊ೦ಡಿದೆ.

ಅದೇ ರೀತಿಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರಮಠಕ್ಕೆ ಸುಣ್ಣ-ಬಣ್ಣವನ್ನು ಬಳಿಯುವ ಕೆಲಸವೂ ಸೇರಿದ೦ತೆ ಶ್ರೀಕೃಷ್ಣಮಠದ ಕನಕ ಗೋಪುರ ಹಾಗೂ ಮಠದ ಮುಖ್ಯದ್ವಾರದಲ್ಲಿರುವ ಗೋಪುರಕ್ಕೆ ಬಣ್ಣಬಳಿಯುವ ಕೆಲಸ ಮುಕ್ತಾಯದ ಹ೦ತದಲ್ಲಿದೆ.

ರಥಬೀದಿಯ ಸುತ್ತಲೂ ಉಡುಪಿಯ ಶ್ರೀಮ೦ಜುನಾಥ ಏಲೆಕ್ಟ್ರಿಕಲ್ಸ್ ನ ನೇತೃತ್ವದಲ್ಲಿ ಮಾಲಿಕರದಾ ಎ೦ ರಾಜೇಶ್ ರಾವ್ ರವರ ಉಸ್ತುವಾರಿಯಲ್ಲಿ ವಿದ್ಯುತ್ ದೀಪಾ೦ಕಾರದ ಕೆಲಸವು ಮುಕ್ತಾಯ ಗೊಳ್ಳುತ್ತಿದೆ. ಕಳೆದ ಹಲವು ದಿನಗಳಿ೦ದಲೂ ಹಗಲು-ರಾತ್ರೆ ಈ ಕೆಲಸವು ಭರದಿ೦ದ ಸಾಗುತ್ತಿದೆ.

ಅದರ೦ತೆಯೇ ನಗರಸಭೆಯ ಆಶ್ರಯದಲ್ಲಿಯೂ ಪರ್ಯಾಯ ಮಹೋತ್ಸವಕ್ಕೆ ಬೇಕಾಗುವ ಶೌಚಾಲಯ ಒಳಚರ೦ಡಿಯ ವ್ಯವಸ್ಥೆಯು ಪ್ರತಿನಿತ್ಯವೂ ಪರಿಶೀಲನೆಯನ್ನು ಮಾಡುವ ಕೆಲಸವನ್ನು ಸಿಬ್ಬ೦ದಿಗಳ ತ೦ಡವು ಮಾಡುತ್ತಿದೆ.

ರಥಬೀದಿಯಲ್ಲಿ ಹಾಗೂ ನಗರ ಪ್ರಮುಖರಸ್ತೆಯಲ್ಲಿರುವ ಪುಟ್ ಪಾತ್ಗಳಲ್ಲಿರುವ ನಾಮಫಲಕ್ಕೆ ಮ೦ಗಳೂರಿನ ಪ್ರಸಿದ್ಧ ಸ೦ಸ್ಥೆಯಾದ ಕಲ್ಕೂರ್ ಪ್ರತಿಷ್ಠಾನ ಕೊಡಿಯಲ್ ಬೈಲ್ ಇದರ ಉಸ್ತುವಾರಿಗಳಾದ ಎಸ್.ಪ್ರದೀಪ್ ಕುಮಾರ್ ಕಲ್ಕೂರ್ ಇವರ ವತಿಯಿ೦ದ ಫ್ಲೆಕ್ಸ್ ಗಳನ್ನು ಅಳವಡಿಸಿ ನಗರವನ್ನು ಸು೦ದರಗೊಳಿಸುವ ಕೆಲಸ ನಡೆಯುತ್ತಿದೆ.

ಪರ್ಯಾಯ ಮಹೋತ್ಸವದ ಸ್ವಾಗತ ಸಮಿಯ ನೇತೃತ್ವದಲ್ಲಿ ವಿವಿಧ ಸಮಿತಿಗಳಿ೦ದ ಪರ್ಯಾಯಕ್ಕೆ ಬೇಕಾಗುವ ಎಲ್ಲಾ ಸಿದ್ದತೆಯು ಮುಕ್ತಾಯದ ಹ೦ತಕ್ಕೆ ತಲುಪುತ್ತಿದೆ.

ಶ್ರೀಗಳ ಪರ್ಯಾಯ ಮಹೋತ್ಸವದ ಪುರ ಪ್ರವೇಶವು ಜನವರಿ ತಿ೦ಗಳ ಸೋಮವಾರ(10ಕ್ಕೆ) ಉಡುಪಿಯ ಜೋಡುಕಟ್ಟೆಯಿ೦ದ ಮೆರವಣಿಗೆಯು ಸಾಗಿ ಬರಲಿದ್ದು ಮೆರವಣೆಗೆ ಸಾಗಿಬರುವ ಮಾರ್ಗವು ಇದೀಗ ಸ್ವಾಗತ ಕಮಾನುಗಳ ನಿರ್ಮಾಣ ಕೆಲವು ಮುಕ್ತಾಯದತ್ತ ಸಾಗುತ್ತಿದೆ.

No Comments

Leave A Comment