Log In
BREAKING NEWS >
ನವೆ೦ಬರ್ 22ರಿ೦ದ ನವೆ೦ಬರ್ 27ರವರೆಗೆ ಉಡುಪಿಯ ಮಹತೋಭಾರ ಶ್ರೀಚ೦ದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಜರಗಲಿದೆ....,,,ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....

ಮೈಸೂರಿನಲ್ಲಿ ಮೊಟ್ಟ ಮೊದಲ ಓಮಿಕ್ರಾನ್ ಪ್ರಕರಣ: 9 ವರ್ಷದ ಬಾಲಕಿಗೆ ಸೋಂಕು

ಮೈಸೂರು : ಕೊರೋನಾ ರೂಪಾಂತರಿ ಓಮಿಕ್ರಾನ್​ ವೈರಸ್​ ರಾಜ್ಯದಲ್ಲೆಡೆ ಆರ್ಭಟ ಜೋರಾಗಿದ್ದು, ಬೆಂಗಳೂರು, ಬೆಳಗಾವಿ ನಂತರ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.

ಸಾಂಸ್ಕೃತಿಕ ನಗರಿಯಲ್ಲಿ ಮೊದಲ ಹೊಸ ವೈರಸ್​​ ಪತ್ತೆಯಾಗಿದ್ದು, ವಿದೇಶದಿಂದ ಬಂದಿದ್ದ9 ವರ್ಷದ  ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್​​ಲ್ಯಾಂಡ್​​ನಲ್ಲಿ ನೆಲೆಸಿದ್ದರು. ಕ್ರಿಸ್​​ಮಸ್​ ಸಲುವಾಗಿ ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬರುವ ಮುಂಚೆ ಅಬುದಾಬಿಗೆ ತೆರಳಿದ್ದರು .

ಸೋಂಕಿತ ಬಾಲಕಿಗೆ ಯಾವುದೇ ಲಕ್ಷಣಗಳಿಲ್ಲ. ವೈದ್ಯರು ಪ್ರತ್ಯೇಕವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಾಥಮಿಕ, ದ್ವಿತೀಯ ಸೋಂಕಿತರ ಪತ್ತೆ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಯಿಂದ ಮಾಹಿತಿಯನ್ನು ನೀಡಿದ್ದಾರೆ.

No Comments

Leave A Comment